Wednesday, October 5, 2022

Latest Posts

IFFM ಅವಾರ್ಡ್​​ 2022: ರಣವೀರ್​ ಸಿಂಗ್​ಗೆ ಅತ್ಯುತ್ತಮ ನಟ ಪ್ರಶಸ್ತಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್

‘ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್’ ಸಮಾರಂಭದಲ್ಲಿ ಬಾಲಿವುಡ್​ ನಟ ರಣ​ವೀರ್​ ಸಿಂಗ್​ ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದರು.

’83’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ರಣ​ವೀರ್​ ಸಿಂಗ್​​ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು. 1983ರಲ್ಲಿ ಏಕದಿನ ಕ್ರಿಕೆಟ್‌ ವಿಶ್ವಕಪ್​ ಗೆದ್ದ ಕಥೆಯಾಧಾರಿತ ಚಿತ್ರದಲ್ಲಿ ಇವರು ಕಪಿಲ್​ ದೇವ್​ ಪಾತ್ರಕ್ಕೆ ಬಣ್ಣ ಹಚ್ಚಿದ್ದರು.

ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್ (IFFM) ನಲ್ಲಿ 83 ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿರುವುದು ಸಂತೋಷವಾಗಿದೆ ಎಂದು ರಣ​ವೀರ್​ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

ವೆಬ್ ಸರಣಿ ಮುಂಬೈ ಡೈರೀಸ್ 26/11, ವಿದ್ಯಾ ಬಾಲನ್-ಶೆಫಾಲಿ ಶಾ ಅಭಿನಯದ ‘ಜಲ್ಸಾ’ (2022) ಪ್ರಶಸ್ತಿ ಗೆದ್ದಿವೆ. ದಕ್ಷಿಣ ಚಿತ್ರರಂಗದ ನಟ ಸೂರ್ಯ ಅಭಿನಯದ ‘ಜೈ ಭೀಮ್’ ಮತ್ತು ಬಾಲಿವುಡ್ ನಟಿ ಆಲಿಯಾ ಭಟ್ ಅಭಿನಯದ ‘ಗಂಗೂಬಾಯಿ ಕಥಿಯಾವಾಡಿ’ ಸಿನಿಮಾಗಳು ಈ ಉತ್ಸವದಲ್ಲಿ ಹೆಚ್ಚು ನಾಮನಿರ್ದೇಶನಗೊಂಡ ಚಿತ್ರಗಳಾಗಿದ್ದವು. ಈ ಎರಡೂ ಚಿತ್ರಗಳು ಯಾವುದೇ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿವೆ.

IFFM 2022ರ ವಿಜೇತರ ಪಟ್ಟಿ ಹೀಗಿದೆ:

ಅತ್ಯುತ್ತಮ ಚಲನಚಿತ್ರ: 83
ಅತ್ಯುತ್ತಮ ನಿರ್ದೇಶಕ: ಶೂಜಿತ್ ಸರ್ಕಾರ್ (ಸರ್ದಾರ್ ಉದಾಮ್) ಮತ್ತು ಅಪರ್ಣಾ ಸೇನ್ (ದಿ ರೇಪಿಸ್ಟ್).
ಅತ್ಯುತ್ತಮ ನಟ: ರಣವೀರ್ ಸಿಂಗ್ (83)
ಅತ್ಯುತ್ತಮ ನಟಿ: ಶೆಫಾಲಿ ಶಾ (ಜಲ್ಸಾ)
ಅತ್ಯುತ್ತಮ ಸೀರಿಸ್: ಮುಂಬೈ ಡೈರೀಸ್ 26/11
ಸೀರಿಸ್​ನ ಅತ್ಯುತ್ತಮ ನಟ: ಮೋಹಿತ್ ರೈನಾ (ಮುಂಬೈ 26/11)
ಸೀರಿಸ್​ನ ಅತ್ಯುತ್ತಮ ನಟಿ: ಸಾಕ್ಷಿ ತನ್ವರ್ (ಮೈ/my)
ಅತ್ಯುತ್ತಮ ಇಂಡಿ ಚಿತ್ರ(Indie Film): ಜಗ್ಗಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!