ಐಫಾ ಅವಾರ್ಡ್ಸ್​ 2024: ಕನ್ನಡದ ಈ ಎರಡು ಸಿನಿಮಾಗಳಿಗೆ ಪ್ರಶಸ್ತಿಗಳ ಗರಿಮೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಅಬುಧಾಬಿಯಲ್ಲಿ ಅದ್ಧೂರಿಯಾಗಿ ನಡೆಯುತ್ತಿರುವ ಐಫಾ ಅವಾರ್ಡ್ಸ್​ 2024 ನಲ್ಲಿ ಭಾರತದ ಐದು ಪ್ರಮುಖ ಚಿತ್ರರಂಗಳ ಗಣ್ಯರು ಭಾಗಿಯಾಗಿದ್ದಾರೆ.

ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಚಿತ್ರರಂಗದ ಅತ್ಯುತ್ತಮ ಸಿನಿಮಾ, ತಂತ್ರಜ್ಞರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಆದರೆ ಎಲ್ಲ ವಿಭಾಗದ ಪ್ರಶಸ್ತಿಯನ್ನೂ ಕನ್ನಡದ ಕೇವಲ ಎರಡೇ ಸಿನಿಮಾಗಳಿಗೆ ಕೊಟ್ಟು ಕೈತೊಳೆದುಕೊಂಡಿದೆ ಐಫಾ. 2023 ರಲ್ಲಿ ಕನ್ನಡದಲ್ಲಿ ಹಲವಾರು ಸಿನಿಮಾಗಳು ಬಿಡುಗಡೆ ಆಗಿವೆ. ಆದರೆ ಐಫಾ ಕೇವಲ ಎರಡೇ ಸಿನಿಮಾಗಳಿಗೆ ಇರುವ ಎಲ್ಲ ಪ್ರಶಸ್ತಿಗಳನ್ನೂ ಕೊಟ್ಟು ಬಿಟ್ಟಿದೆ.

ಸೆಪ್ಟೆಂಬರ್ 27ರಂದು ಪ್ರಾರಂಭವಾಗಿರುವ ಐಫಾ ಅವಾರ್ಡ್ಸ್​ 29ರ ವರೆಗೆ ನಡೆಯಲಿದೆ.

ಅತ್ಯುತ್ತಮ ಸಿನಿಮಾ: ಕಾಟೇರ

ಅತ್ಯುತ್ತಮ ನಟ: ರಕ್ಷಿತ್ ಶೆಟ್ಟಿ (ಸಪ್ತ ಸಾಗರದಾಚೆ ಎಲ್ಲೊ)

ಅತ್ಯುತ್ತಮ ನಟಿ: ರುಕ್ಮಿಣಿ ವಸಂತ್ (ಸಪ್ತ ಸಾಗರದಾಚೆ ಎಲ್ಲೊ)

ಅತ್ಯುತ್ತಮ ನಿರ್ದೇಶಕ: ತರುಣ್ ಸುಧೀರ್ (ಕಾಟೇರ)

ಅತ್ಯುತ್ತಮ ಪೋಷಕ ನಟಿ: ಶ್ರುತಿ (ಕಾಟೇರ)

ಅತ್ಯುತ್ತಮ ಪೋಷಕ ನಟ: ಗೋಪಾಲ ಕೃಷ್ಣ ದೇಶಪಾಂಡೆ (ಸಪ್ತ ಸಾಗರದಾಚೆ ಎಲ್ಲೊ)

ಅತ್ಯುತ್ತಮ ವಿಲನ್: ಜಗಪತಿ ಬಾಬು (ಕಾಟೇರ)

ಅತ್ಯುತ್ತಮ ಸಂಗೀತ: ವಿ ಹರಿಕೃಷ್ಣ (ಕಾಟೇರ)

ಅತ್ಯುತ್ತಮ ಸಾಹಿತ್ಯ: ಧನಂಜಯ ರಂಜನ್ (ಸಪ್ತ ಸಾಗರದಾಚೆ ಎಲ್ಲೊ)

ಅತ್ಯುತ್ತಮ ಗಾಯಕ: ಎಂಸಿ ಬಿಜ್ಜು (ಸಪ್ತ ಸಾಗರದಾಚೆ ಎಲ್ಲೊ-ನದಿಯೇ)

ಅತ್ಯುತ್ತಮ ಗಾಯಕಿ: ಶ್ರೀಲಕ್ಷ್ಮಿ ಬೆಳ್ಮಣ್ಣು (ಸಪ್ತ ಸಾಗರದಾಚೆ ಎಲ್ಲೊ)

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!