Thursday, March 23, 2023

Latest Posts

VIRAL VIDEO| ಪುಣ್ಯಸ್ನಾನ ಮಾಡಲು ಹೋದ ವಿದ್ಯಾರ್ಥಿ ಸ್ನೇಹಿತರೆದುರೇ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೆಲವೊಮ್ಮೆ ಅನಿರೀಕ್ಷಿತ ಅಪಘಾತಗಳು ಸಂಭವಿಸುತ್ತವೆ. ನಿಜವಾಗಿ ಏನಾಯಿತು ಎಂಬುದನ್ನು ಅರಿತುಕೊಳ್ಳುವ ಮೊದಲೇ ಜೀವಗಳು  ಕಣ್ಣೆದುರೇ ಸಾವಿನ ಮಡಿಲಿಗೆ ಬೀಳುತ್ತಾರೆ. ಇಂತಹದೊಂದು ಆಘಾತಕಾರಿ ಘಟನೆ ಹರಿದ್ವಾರದಲ್ಲಿ ನಡೆದಿದೆ.

ಗಂಗಾನದಿಯಲ್ಲಿ ಪುಣ್ಯಸ್ನಾನ ಮಾಡಲು ಹೋದ ವಿದ್ಯಾರ್ಥಿಯೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಐಐಟಿ ರೂರ್ಕಿಯ ವಿದ್ಯಾರ್ಥಿಗಳು ಹರಿದ್ವಾರದ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಲು ಬಂದಿದ್ದರು. ಸಿದ್ದಾರ್ಥ್ ಎಂಬ ವಿದ್ಯಾರ್ಥಿ ಅನಿರೀಕ್ಷಿತವಾಗಿ ಪ್ರಾಣ ಕಳೆದುಕೊಂಡಿದ್ದಾನೆ. ಈಜುವ ಸಾಮರ್ಥ್ಯವಿದ್ದರೂ ಕೂಡ ನದಿಯಲ್ಲಿ ಪ್ರವಾಹದ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ.

ದಡದಲ್ಲಿದ್ದ ಸ್ನೇಹಿತರ ಕಣ್ಣೆದುರೇ ದುರಂತ ಸಂಭವಿಸಿದೆ. ದಡದಲ್ಲಿದ್ದ ಇನ್ನೊಬ್ಬ ಸ್ನೇಹಿತ ಎಲ್ಲವನ್ನೂ ವಿಡಿಯೋ ಮಾಡಿದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೃತರನ್ನು ಸಿದ್ಧಾರ್ಥ್ ಗೆಹ್ಲೋಟ್ (21) ಎಂದು ಪೊಲೀಸರು ಗುರುತಿಸಿದ್ದಾರೆ. ಅವರ ಹುಟ್ಟೂರು ರಾಜಸ್ಥಾನದ ನಾಗೌರ್ ಜಿಲ್ಲೆ. ಅವರು ಐಐಟಿ ರೂರ್ಕಿಯಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಓದುತ್ತಿದ್ದಾರೆ. ಸ್ನೇಹಿತರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ ನದಿಗೆ ಇಳಿದಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದ್ದು, ಸಿದ್ದಾರ್ಥ್ ಮೃತದೇಹ ಪತ್ತೆಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!