Tuesday, March 28, 2023

Latest Posts

ವಿಶ್ವೇಶ್ವರಯ್ಯಗೆ ಏರೋ ಇಂಡಿಯಾ ಶೋ ಅರ್ಪಣೆ, 251 ದೊಡ್ಡ ಒಪ್ಪಂದಗಳಾಗುವ ನಿರೀಕ್ಷೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನಲ್ಲಿ ಇಂದಿನಿಂದ ಏರೋ ಇಂಡಿಯಾ ಶೋ ಆರಂಭವಾಗಲಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ಐದು ದಿನಗಳು ನಡೆಯುವ ಏರ್‌ಶೋನ್ನು ಸರ್.ಎಂ. ವಿಶ್ವೇಶ್ವರಯ್ಯ ಅವರಿಗೆ ಸಮರ್ಪಣೆ ಮಾಡಿದ್ದು ಈ ಬಾರಿಯ ವಿಶೇಷವಾಗಿದೆ.

ವಿಶ್ವೇಶ್ವರಯ್ಯ ಅವರು ಸ್ವಾತಂತ್ರ್ಯಕ್ಕೂ ಮುನ್ನವೇ ಸಾಕಷ್ಟು ಕೈಗಾರಿಕೆಗಳನ್ನು ನಿರ್ಮಿಸಿದ್ದರು, ಅವರ ಪ್ರೇರಣೆಯಿಂದ ಈ ಬಾರಿ ಏರ್‌ಶೋನ ಥೀಮ್ ನಿರ್ಮಾಣವಾಗಿದೆ. ಸ್ವಾವಲಂಬಿ ಭಾರತ ಮತ್ತು ಭವಿಷ್ಯದ ರೆಕ್ಕೆ ಥೀಮ್‌ನಲ್ಲಿ ಶೋ ನಡೆಯಲಿದೆ.

ಏರ್‌ಶೋನಲ್ಲಿ ಬರೋಬ್ಬರಿ 98 ದೇಶಗಳು ಪಾಲ್ಗೊಳ್ಳುತ್ತಿದ್ದು, ಇದು ಕೇವಲ ವೈಮಾನಿಕ ಪ್ರದರ್ಶನ ಅಷ್ಟೇ ಅಲ್ಲ, ವಿಶ್ವಾದ್ಯಂತ ರಕ್ಷಣಾ ಕ್ಷೇತ್ರಗಳ 809 ಕಂಪನಿಗಳು ತಮ್ಮ ಉತ್ಪನ್ನಗಳನ್ನೂ ಪ್ರದರ್ಶನಕ್ಕಿಡುತ್ತಿವೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಯಲಹಂಕದ ಐಎಎಫ್ ನಿಲ್ದಾಣದಲ್ಲಿ 35 ಸಾವಿರ ಚದರ ಮೀಟರ್ ಜಾಗದಲ್ಲಿ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಹಲವು ದೇಶಗಳ ಮುಖ್ಯಸ್ಥರು ಆಗಮಿಸಲಿದ್ದಾರೆ ಎಂದಿದ್ದಾರೆ.

ಬೋಯಿಂಗ್, ಲಾಕ್‌ಹೀಡ್, ಮಾರ್ಟಿನ್, ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್, ಜನರಲ್ ಅಟಾಮಿಕ್ಸ್, ಲೀಬೆರ್ ಗ್ರೂಪ್ ಹೀಗೆ ಸಾಕಷ್ಟು ಕಂಪನಿಗಳ ಸಿಇಒಗಳು ದುಂಡು ಮೇಜಿನ ಸಭೆಯಲ್ಲಿ ಪಾಲ್ಗೊಳ್ಳಲಿವೆ. ಈ ಬಾರಿ ಅಂದಾಜು 251 ಒಪ್ಪಂದಗಳಾಗುವ ನಿರೀಕ್ಷೆ ಇದೆ. ಇದು ಸಾಧ್ಯವಾದರೆ 75 ಸಾವಿರ ಕೋಟಿಯಷ್ಟು ಬಂಡವಾಳ ದೊರೆಯಲಿದ್ದು, ಭಾರತದ ಆರ್ಥಿಕತೆಗೆ ಇದು ಅತಿ ಪ್ರಮುಖವಾಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!