ನ್ಯೂಜಿಲೆಂಡ್ ನಿಂದ ಅಕ್ರಮಕಾರಿ ಬ್ಯಾಟಿಂಗ್: ನೆದರ್ಲೆಂಡ್‌ ಗೆಲುವಿಗೆ 322 ರನ್​ ಟಾರ್ಗೆಟ್

ಹೊಸದಿಂತ ಡಿಜಿಟಲ್‌ ಡೆಸ್ಕ್:‌

ಏಕದಿನ ವಿಶ್ವಕಪ್‌ ಕ್ರಿಕೆಟ್‌ನ ಇಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ‘ಕ್ರಿಕೆಟ್​ ಶಿಶು’ ನೆದರ್ಲೆಂಡ್‌ ಮುಖಮುಖಿಯಾಗಿದ್ದು, ನಿಗದಿತ 50 ಓವರ್‌ಗಳಂತ್ಯಕ್ಕೆ ನ್ಯೂಜಿಲೆಂಡ್​ 7 ವಿಕೆಟ್​ ನಷ್ಟಕ್ಕೆ 322 ರನ್​ ಗಳಿಸಿತು.

ಟಾಸ್​ ಸೋತ ಕಿವೀಸ್​ ಮೊದಲು ಬ್ಯಾಟಿಂಗ್​ ಮಾಡಿತು. ನ್ಯೂಜಿಲೆಂಡ್​ನ ಆರಂಭಿಕರಾದ ಡೆವೊನ್ ಕಾನ್ವೆ ಮತ್ತು ವಿಲ್ ಯಂಗ್ ಮೊದಲ ಪವರ್​ ಪ್ಲೇವರೆಗೆ ಉತ್ತಮವಾಗಿ ಕ್ರೀಸ್​ ಹಂಚಿಕೊಂಡು 67 ರನ್​ ಜೊತೆಯಾಟವಾಡಿದರು. ಮೊದಲ ಪಂದ್ಯದಲ್ಲಿ ಶತಕ ದಾಖಲಿಸಿದ್ದ ಕಾನ್ವೆ ಇಂದು 32 ರನ್​ಗೆ ವಿಕೆಟ್​ ಕೊಟ್ಟರು. ಎರಡನೇ ವಿಕೆಟ್​ಗೆ ವಿಲ್ ಯಂಗ್ ಮತ್ತು ರಚಿನ್ ರವೀಂದ್ರ 77 ರನ್​ಗಳ ಜೊತೆಯಾಟ ನೀಡಿದರು.

ಕೇನ್​ ವಿಲಿಯಮ್ಸನ್​ ಸ್ಥಾನದಲ್ಲಿ ಆಡುತ್ತಿರುವ ರಚಿನ್ ರವೀಂದ್ರ (51) ತಮ್ಮ ಎರಡನೇ ಪಂದ್ಯದಲ್ಲಿ ಅರ್ಧಶತಕ ಗಳಿಸಿ ಔಟಾದರು. ಡೇರಿಲ್ ಮಿಚೆಲ್ 48 ರನ್​ಗಳ ಇನ್ನಿಂಗ್ಸ್​ ಕಟ್ಟಿದರೆ, ಗ್ಲೆನ್ ಫಿಲಿಪ್ಸ್ (4), ಮಾರ್ಕ್ ಚಾಪ್ಮನ್ (5) ವಿಫಲರಾದರು. ನಾಯಕ ಟಾಮ್ ಲಾಥಮ್ (53) ಮಧ್ಯಮ ಕ್ರಮಾಂಕದಲ್ಲಿ ಅರ್ಧಶತಕ ಗಳಿಸಿದರು.

ಅಂತಿಮವಾಗಿ ಮಿಚೆಲ್ ಸ್ಯಾಂಟ್ನರ್ ಮತ್ತು ಮ್ಯಾಟ್ ಹೆನ್ರಿ ಡಚ್ಚರನ್ನು ಕಾಡಿದರು. ಕೊನೆಯ ಓವರ್‌ನಲ್ಲಿ ಬಾಸ್ ಡಿ ಲೀಡೆ 21 ರನ್​ ಬಿಟ್ಟುಕೊಟ್ಟು ದುಬಾರಿಯಾದರು. ನ್ಯೂಜಿಲೆಂಡ್​ 322 ರನ್​ಪೇರಿಸಿತು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!