ಹೊಸದಿಂತ ಡಿಜಿಟಲ್ ಡೆಸ್ಕ್:
ಕುಮಾರಸ್ವಾಮಿಯವರು ಈಗಾಗಲೇ ಕೇಂದ್ರ ಗೃಹ ಸಚಿವರೊಂದಿಗೆ ಚರ್ಚೆ ನಡೆಸಿದ್ದಾರೆ. ಬಿಜೆಪಿಯೊಂದಿಗೆ ಹೊಂದಾಣಿಕೆಯ ಮಾತುಕತೆ ನಡೆಸಲಾಗಿದೆ ಆದರೆ ಸೀಟು ಹಂಚಿಕೆಯ ಬಗ್ಗೆ ಇನ್ನೂ ಚರ್ಚೆ ನಡೆಯಬೇಕಷ್ಟೆ.ಆದುದರಿಂದ ಸೀಟು ಹಂಚಿಕೆ ಬಗ್ಗೆ ನಿರ್ಧಾರವಾಗಿಲ್ಲ.ಲೋಕಸಭಾ ಚುನಾವಣೆಗೆ ಇನ್ನೂ ನಾಲ್ಕು ತಿಂಗಳು ಇರುವ ಕಾರಣ ದಸರಾ ಕಳೆದು ಸೀಟು ಹಂಚಿಕೆ ಚರ್ಚೆ ನಡೆಯಲಿದೆ. ಕಳೆದು ನನ್ನ ಆರೋಗ್ಯ ಸುಧಾರಿಸಿದರೆ ಸೆಷನ್ ಕಳೆದ ಬಳಿಕ ನಾನು ಗೃಹ ಸಚಿವರಲ್ಲಿ ಮಾತನಾಡುತ್ತೇನೆ. ಇಲ್ಲವಾದರೆ ಕುಮಾರಸ್ವಾಮಿ ಅವರು ಮತ್ತೆ ಗೃಹಮಂತ್ರಿಗಳ ಜೊತೆ ಚರ್ಚೆ ನಡೆಸಲಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.
ಕುಕ್ಕೆ ಸುಬ್ರಹ್ಮಣ್ಯಕ್ಕೆ ಸೋಮವಾರ ಭೇಟಿ ನೀಡಿ ಶ್ರೀ ದೇವರ ದರುಶನ ಪಡೆದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಹಿಂದಿನ ಚುನಾವಣೆಯ ಮತ ಗಳಿಕೆ ಒಟ್ಟು ಗೂಡಿಸಿ ಸೀಟು ಹಂಚಿಕೆ ಬಗ್ಗೆ ಒಂದು ನಿರ್ಧಾರಕ್ಕೆ ಬರಲಾಗುತ್ತದೆ. ಗೃಹ ಸಚಿವರೊಂದಿಗೆ ಮತ್ತೆ ಚರ್ಚೆ ಮಾಡಿ ಕುಮಾರಸ್ವಾಮಿ ಅವರು ಚೀಟು ಹಂಚಿಕೆಯನ್ನು ಪೈನಲ್ ಮಾಡುತ್ತಾರೆ.ಈಗ ಸೀಟು ಹಂಚಿಕೆ ವಿಷಯವು ಅಂತಿಮವಾಗಿಲ್ಲ ಎಂದರು.
ಮೊದಲು ಎಂಎಲ್‌ಎ ಎಂಎಲ್‌ಸಿಗಳೊಂದಿಗೆ ಚರ್ಚೆ
ಮೈತ್ರಿಗೆ ಮೊದಲು ಜೆಡಿಎಸ್‌ನ ೧೯ ಎಂಎಲ್‌ಎಗಳೊಂದಿಗೆ ಮತ್ತು ೮ ಎಂ.ಎಲ್.ಸಿಇಗಳೊಂದಿಗೆ ಹಾಗೂ ಪಕ್ಷದ ಅಧ್ಯಕ್ಷ ಸಿ.ಎಮ್. ಇಬ್ರಾಹಿಂ ಅವರ ಜೊತೆ ಎರಡು ಸುತ್ತು ಮಾತುಕತೆ ನಡೆಸಲಾಗಿದೆ.ಈ ಮಾತುಕತೆ ಬಳಿಕ ಕುಮಾರಸ್ವಾಮಿ ಅವರು ಕೇಂದ್ರ ಗೃಹಮಂತ್ರಿಗಳ ಭೇಟಿ ಮಾಡಿದರು.ಅಲ್ಲದೆ ಜೆಡಿಎಸ್ ಬಿಜೆಪಿ ಹೊಂದಾಣಿಕೆ ಬಗ್ಗೆ ಅವರೊಂದಿಗೆ ಚರ್ಚಿಸಿದರು ಎಂದು ಮಾಜಿ ಪ್ರಧಾನಿಗಳು ನುಡಿದರು.
ಯಾವುದೇ ಕ್ಷೇತ್ರದ ಬಗ್ಗೆ ಚರ್ಚಿತವಾಗಿಲ್ಲ
ಮಂಡ್ಯ ಸೇರಿದಂತೆ ಯಾವುದೇ ತೀರ್ಮಾನ ಆಗಿಲ್ಲ.ಸದ್ಯ ಹಾಸನ ಜೆಡಿಎಸ್, ರಾಮನಗರ ಕಾಂಗ್ರೆಸ್ ಕೈಯಲ್ಲಿದೆ.ಉಳಿದೆಡೆ ಬಿಜೆಪಿನೆ ಇದೆ.ಹಾಗಾಗಿ ಮುಂದೆ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು.ದಸರಾ ಮುಗಿದ ಬಳಿಕ ಕುಮಾರಸ್ವಾಮಿ ಅವರು ಕೇಂದ್ರ ಗೃಹ ಸಚಿವರನ್ನು ಭೇಟಿಯಾಗಿ ಸೀಟು ಹಂಚಿಕೆಯ ಬಗ್ಗೆ ಅಂತಿಮ ನಿರ್ಧಾರ ತಳೆಯುತ್ತಾರೆ ಎಂದು ಮಾಜಿ ಪ್ರಧಾನಿಗಳು ಹೇಳಿದರು.
ಜೆಡಿಎಸ್ ಬಿಜೆಪಿ ಹೊಂದಾಣಿಕೆ
ಈ ಬಾರಿ ಕಾಂಗ್ರೆಸ್ ೨೮ ಗೆಲ್ಲುವ ಉತ್ಸಾಹದಲ್ಲಿದೆ.ಆ ಕಾರಣಕ್ಕೆ ಬಿಜೆಪಿ,ಜೆಡಿಎಸ್ ಒಂದುಗೂಡಿ ಹೋಗುವ ನಿರ್ಧಾರಕ್ಕೆ ಬಂದಿದ್ದೇವೆ
ಜಾತಿ ಆಧಾರದಲ್ಲಿ ಮತ ವಿಭಜನೆಯ ಬಗ್ಗೆ ನಾನು ಈಗ ವಾದ ಮಾಡಲ್ಲ.ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಶೇ.೩೦ರಿಂದ ೩೩, ಕಾಂಗ್ರೆಸ್‌ಗೆ ಶೇ.೪೦, ಜೆಡಿಎಸ್‌ಗೆ ಶೇ.೨೦-೨೨ ಮತ ದೊರಕಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಾರಿಗೆ ಮತದಾನ ಮಾಡಬೇಕು ಅನ್ನುವುದನ್ನು ಮತದಾರರು ತೀರ್ಮಾನಿಸುತ್ತಾರೆ ಎಂದು ಎಚ್‌ಡಿಡಿ ಹೇಳಿದರು.