ಕಾರ್‌ನಲ್ಲಿ ಅಕ್ರಮ ಗೋವಾ ಮದ್ಯ ಸಾಗಾಟ: ಇಬ್ಬರ ಬಂಧನ

ಹೊಸದಿಗಂತ ವರದಿ ಅಂಕೋಲಾ:

ಕಾರೊಂದರಲ್ಲಿ ಸಾಗಿಸಲಾಗುತ್ತಿದ್ದ ಅಕ್ರಮ ಗೋವಾ ಸರಾಯಿ ಕರಾವಳಿ ಕಾವಲು ಪಡೆ ಪೊಲೀಸರು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ ಘಟನೆ ತಾಲೂಕಿನ ಬೆಲೆಕೇರಿ ಕಡಲ ತೀರದ ವಾಚ್ ಟವರ್ ಬಳಿ ನಡೆದಿದೆ.

ಹಾಸನ ಜಿಲ್ಲೆಯ ಅರಸೀಕೆರೆ ನಿವಾಸಿ ಪ್ರಶಾಂತ ಸ್ವಾಮಿಲಾಲ ನಾಯ್ಕ(31) ಮತ್ತು ಭಾನುಪ್ರಕಾಶ ಪುಟ್ಟಸ್ವಾಮಿ ನಾಯ್ಕ (43) ಬಂಧಿತ ಆರೋಪಿಗಳಾಗಿದ್ದಾರೆ.

ಆರೋಪಿತರು ಕೆ.ಎ50 ಪಿ 7910 ನೋಂದಣಿ ಸಂಖ್ಯೆಯ ರೆನಾಲ್ಟ್ ಕ್ವಿಡ್ ಕಾರಿನ ಡಿಕ್ಕಿಯಲ್ಲಿ ಗೋವಾ ರಾಜ್ಯದಲ್ಲಿ ತಯಾರಾದ ಒಂದಕ್ಕೆ 825 ರೂಪಾಯಿ ಬೆಲೆಯ ಲೀಟರಿನ ಮೆನ್ಶನ್ ಹೌಸ್ ಬ್ರಾಂಡಿ ನಾಲ್ಕು ಬಾಟಲಿಗಳು, ಒಂದು ಬಾಟಲಿಗೆ 925 ರೂಪಾಯಿ ಬೆಲೆಯ 2 ಲೀಟರಿನ ರಾಯಲ್ ಸ್ಟಾಗ್ ವಿಸ್ಕಿಯ 5 ಬಾಟಲಿಗಳು ಒಂದು ಬಾಟಲಿಗೆ 850 ರೂಪಾಯಿ ಬೆಲೆಯ ಮೆಕಡವಲ್ ರಿಸರ್ವ್ ವಿಸ್ಕಿ 2 ಬಾಟಲಿಗಳು.
ತಲಾ 220 ರೂಪಾಯಿ ಬೆಲೆ ಬಾಳುವ 750 ಎಂ.ಎಲ್ ಬ್ಯಾಗಪೈಪರ್ ಕ್ಲಾಸಿಕ್ ವಿಸ್ಕಿ 12 ಬಾಟಲಿಗಳು, ತಲಾ150 ಬೆಲೆಯ 750 ಎಂ.ಎಲ್ ನ ದಿ ಗ್ರೇಟ್ ಚಾಯ್ಸ್ ಎಕ್ಸಟ್ರಾ ಸ್ಟ್ರಾಂಗ್ ವಿಸ್ಕಿಯ 29 ಬಾಟಲಿಗಳು. ತಲಾ150 ರೂಪಾಯಿ ಬೆಲೆಯ 750 ಎಂ.ಎಲ್ ಬ್ಲೂ ಚಾಯ್ಸ್ ವಿಸ್ಕಿ ಯ 24 ಬಾಟಲಿಗಳು, ಒಂದು ಬಾಟಲಿಗೆ 220 ಬಲೆಯ 750 ಎಂ.ಎಲ್ ನ ಓಲ್ಡ್ ಮಂಕ್ ರಮ್ 6 ಬಾಟಲಿಗಳು ಸೇರಿದಂತೆ ನಾಲ್ಕು ಬ್ಯಾಗುಗಳಲ್ಲಿ ಸಾಗಿಸುತ್ತಿದ್ದ ಒಟ್ಟು 21510 ರೂಪಾಯಿ ಮೌಲ್ಯದ ವಿವಿಧ ಮಾದರಿಯ 82 ಸರಾಯಿ ಬಾಟಲಿಗಳನ್ನು ಕರಾವಳಿ ಕಾವಲು ಪಡೆಯ ಪಿ.ಎಸ್. ಐ ಪ್ರಿಯಾಂಕಾ ನ್ಯಾಮಗೌಡ ಅವರ ನೇತೃತ್ವದಲ್ಲಿ ದಾಳಿ ನಡೆಸಿ ವಶಪಡಿಸಿಕೊಂಡು ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 32, 34,38(ಎ) ರ ಅನ್ವಯ ಪ್ರಕರಣ ದಾಖಲಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!