IPL​ ಸೀಸನ್​​-17: ಹೊಸ ಅವತಾರದಲ್ಲಿ ಬರಲಿದ್ದಾರೆ ಮಿಸ್ಟರ್ ಕೂಲ್ ಕ್ಯಾಪ್ಟನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 17ನೇ ಸೀಸನ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದೀಗ ಮಿಸ್ಟರ್ ಕೂಲ್ ಕ್ಯಾಪ್ಟನ್ ನಾಯಕ ಮಾಹಿ ಬಗ್ಗೆ ಚರ್ಚೆ ನಡೆದಿದೆ. ಚೆನ್ನೈ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಾರಾ? ಈ ವರ್ಷ ಐಪಿಎಲ್‌ನ ಭವಿಷ್ಯ ಕೊನೆಗೊಳ್ಳಲಿದೆಯೇ? ಹೀಗೆ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಆದರೆ ಇದಕ್ಕೆಲ್ಲ ಒಂದೇ ಒಂದು ಪೋಸ್ಟ್‌ ಉತ್ತರ ಕೊಟ್ಟಿದೆ.

ಐಪಿಎಲ್ ಹೊಸ 17 ನೇ ಸೀಸನ್ ಪ್ರಾರಂಭವಾಗಲು ಕೇವಲ 17 ದಿನಗಳು ಮಾತ್ರ ಉಳಿದಿವೆ. ಸದ್ಯಕ್ಕೆ ಮಾಹಿ ಅವರ ಫೇಸ್ ಬುಕ್ ಪೋಸ್ಟ್ ಕುತೂಹಲ ಕೆರಳಿಸಿದೆ. ಈ ಬಾರಿ ಧೋನಿ ಯಾವ ಪಾತ್ರವನ್ನು ಐಪಿಎಲ್ ನಲ್ಲಿ ನಿರ್ವಹಿಸಲಿದ್ದಾರೆ ಎಂಬ ಲೆಕ್ಕಾಚಾರವೂ ನಡೆಯುತ್ತಿದೆ. ಇದಕ್ಕೆ ಕಾರಣ ಧೋನಿ ಅಪ್ಲೋಡ್ ಮಾಡಿರುವ ಒಂದು ಪೋಸ್ಟ್. ನಾನು ಹೊಸ ಸೀಸನ್‌ಗಾಗಿ ಕಾಯುತ್ತಿದ್ದೇವೆ. ಈ ಸೀಸನ್ ನಲ್ಲಿ ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಈ ಒಂದು ಪೋಸ್ಟ್ ಧೋನಿ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!