ಅಕ್ರಮ ಮದ್ಯ ಸಾಗಾಟ: 9.84 ಲಕ್ಷ ರೂ. ಮೌಲ್ಯದ ವಿವಿಧ ಬ್ರ್ಯಾಂಡ್ ಮದ್ಯ ಜಪ್ತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸುಮಾರು 9.84 ಲಕ್ಷ ಮೌಲ್ಯದ ವಿವಿಧ ಬ್ರಾಂಡ್‌ಗಳ ಮದ್ಯವನ್ನು ಜಪ್ತಿ ಮಾಡಲಾಗಿದೆ.

ಹುನಗುಂದ ವಲಯದ ಕೂಡಲಸಂಗಮ‌‌ ಜಂಕ್ಷನ್‌ನಲ್ಲಿ 75,526 ರೂಪಾಯಿ ಮೌಲ್ಯದ 10.80 ಲೀಟರ್ ಮದ್ಯ. ಮುಧೋಳ ವಲಯದ ದಾದನಟ್ಟಿ ಕ್ರಾಸ್ ನಲ್ಲಿ ಒಟ್ಟು 9.09 ಲಕ್ಷ ಮೌಲ್ಯದ 40.50 ಲೀಟರ್ ಗೋವಾ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಎರಡೂ ಸ್ಥಳಗಳಲ್ಲೂ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಜಾನಕಿ‌ ಕೆ.ಎಂ ತಿಳಿಸಿದ್ದಾರೆ. ಶಂಕರಯ್ಯ ಸರಗನಾಚಾರಿ, ಆಕಾಶ ಅಂದೊಡಗಿ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಲಯಕ್ಕೆ ವರದಿ ಸಲ್ಲಿಸಿರುವುದಾಗಿ ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!