Tuesday, July 5, 2022

Latest Posts

ಸಾರ್ವಜನಿಕ ಪ್ರದೇಶದಲ್ಲಿ ಅಕ್ರಮ ಗಾಂಜಾ ಮಾರಾಟ: ಇಬ್ಬರ ಬಂಧನ

ಹೊಸದಿಗಂತ ವರದಿ,ಕಲಬುರಗಿ:

ಸಾರ್ವಜನಿಕ ಪ್ರದೇಶದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಸೆನ್ ಠಾಣೆ ಇನ್ಸ್ಪೆಕ್ಟರ್ ವಾಜೀದ್ ಪಟೇಲ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಬಂಧಿಸಿರುವಂತಹ ಘಟನೆ ಕಲಬುರಗಿ ನಗರದ ಸಂತ್ರಸ್‌ವಾಡಿ ಪ್ರದೇಶದ ಜಿಡಿಎ ಲೇಔಟ್‌ನ ವಾಟರ್ ಟ್ಯಾಂಕ್ ಬಳಿ ಭಾನುವಾರ ನಡೆದಿದೆ.
ಶಿರು ಅಹಮದ್ ಮತ್ತು ರಾಮಲಿಂಗಪ್ಪ ಎಂಬಾತರನ್ನು ಬಂಧಿಸಿರುವ ಪೊಲೀಸರು, ಬಂಧಿತರಿಂದ 1.5 ಕೆಜಿ ಒಣ ಗಾಂಜಾ ಮತ್ತು 4 ಕೆಜಿ ಹಸಿ ಗಾಂಜಾ ಒಟ್ಟು 5.5 ಕೆಜಿ ಗಾಂಜಾ ವಶಪಡಿಸಿಕೊಂಡು,ಎರಡು ಮೊಬೈಲ್, ಬೈಕ್, 2500 ರೂಪಾಯಿ ನಗದನ್ನ ವಶಕ್ಕೆ ಪಡೆಯಲಾಗಿದೆ.
ಇನ್ನೂ ಈ ಕುರಿತು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss