ಇಂಡಿಯಾ ಗೇಟ್‌ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹೊಲೊಗ್ರಾಮ್ ಪ್ರತಿಮೆಯನ್ನು ಅನಾವರಣಗೊಳಿಸಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮದಿನದ ಪ್ರಯುಕ್ತ ಅವರ ಸ್ಮರಣಾರ್ಥ ಇಂಡಿಯಾ ಗೇಟ್‌ನಲ್ಲಿ ಹೊಲೊಗ್ರಾಮ್ ಪ್ರತಿಮೆಯನ್ನು ಪ್ರಧಾನಿ ಮೋದಿ ಅನಾವರಣಗೊಳಿಸಿದರು.

ಈ ಸ್ಥಳದಲ್ಲಿ ಗ್ರಾನೈಟ್ ಪ್ರತಿಮೆಯನ್ನು ಸ್ಥಾಪಿಸುವವರೆಗೆ ಹೊಲೊಗ್ರಾಮ್ ಪ್ರತಿಮೆ ಇರಲಿದೆ.

ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ ಅವರು, ಇಂದು ಐಸಿಹಾಸಿಕ ದಿನವಾಗಿದೆ. ನೇತಾಜಿ ಪ್ರತಿಮೆ ಆತ್ಮವಿಶ್ವಾಸದ ಪ್ರತೀಕ ಎಂದು ಹೇಳಿದರು.

ಈ ಸಂದರ್ಭ 2019, 2020, 2021 ಮತ್ತು 2022 ರ ಸುಭಾಷ್ ಚಂದ್ರ ಬೋಸ್ ಆಪ್ತ ಪ್ರಬಂಧನ್ ಪುರಸ್ಕಾರನ್ನು ನೀಡಿದರು.
ಅನಾವರಣ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಹೊಲೊಗ್ರಾಮ್ ಪ್ರತಿಮೆ
ಹೊಲೊಗ್ರಾಮ್ ಪ್ರತಿಮೆಯು 30,000 ಲ್ಯೂಮೆನ್ಸ್ 4 ಸಾವಿರ ಪ್ರೊಜೆಕ್ಟರ್ʼನಿಂದ ಚಾಲಿತವಾಗಿದೆ. ಅಗೋಚರವಾದ ಹೋಲೋಗ್ರಾಫಿಕ್ ಪರದೆಯನ್ನು ಸಂದರ್ಶಕರಿಗೆ ಗೋಚರಿಸದ ರೀತಿಯಲ್ಲಿ ನಿರ್ಮಿಸಲಾಗಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 3ಡಿ ಚಿತ್ರವನ್ನು ಹೊಲೊಗ್ರಾಮ್ ಪರಿಣಾಮವನ್ನ ಸೃಷ್ಟಿಸಲು ಅದರ ಮೇಲೆ ಬಿಂಬಿಸಲಾಗಿದೆ. ಹೊಲೊಗ್ರಾಮ್ ಪ್ರತಿಮೆಯ ಗಾತ್ರವು 28 ಅಡಿ ಎತ್ತರ ಮತ್ತು 6 ಅಡಿ ಅಗಲವಿದೆ.

ಈಗಾಗಲೇ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನವನ್ನ ಅಳವಡಿಸಲು ದೇಶದಲ್ಲಿ ಗಣರಾಜ್ಯೋತ್ಸವವನ್ನ ಪ್ರತಿ ವರ್ಷ ಜನವರಿ 23ರಂದು ಪ್ರಾರಂಭಿಸಲಾಗುವುದು ಎಂದು ಸರ್ಕಾರ ಘೋಷಿಸಿತ್ತು. ಅದೇ ರೀತಿ ಅವರ ಜನ್ಮ ದಿನವನ್ನು ಪ್ರತಿ ವರ್ಷ ಪರಾಕ್ರಮ್ ದಿವಸ್ ಎಂದು ಆಚರಿಸಲಾಗುತ್ತದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!