October 14, 2026
Wednesday, October 14, 2026
spot_img

ಸರ್ಕಾರಿ ಜಮೀನಿನಲ್ಲಿ ಅಕ್ರಮ ಗಣಿಗಾರಿಕೆ: NDA ಮೈತ್ರಿಕೂಟದಿಂದ ಸ್ಥಳ ಪರಿಶೀಲನೆ

ಹೊಸದಿಗಂತ ವರದಿ ಬೆಳಗಾವಿ :

ಜಿಲ್ಲೆಯ ಬೈಲಹೊಂಗಲ ವಿಧಾನಸಭಾ ಮತಕ್ಷೇತ್ರದ ಮುರುಗೋಡ ಗ್ರಾಮದ ಸರ್ಕಾರಿ ಜಮೀನಿನಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಹಾಗೂ ವಿವಿಧ ಜಾತಿಯ ಗಿಡಮರಗಳನ್ನು ಕಡಿದು ಪರಿಸರ ನಾಶ ಮಾಡಲಾಗುತ್ತಿದೆ ಎಂದು ಆರೋಪಿಸಿ, NDA ಮೈತ್ರಿಕೂಟದ ಮುಖಂಡರ ನೇತೃತ್ವದ ನಿಯೋಗವು ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎನ್ನಲಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಸರ್ಕಾರಿ ಜಮೀನಿನಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ಪರಿಸರಕ್ಕೆ ಹಾನಿಯಾಗುತ್ತಿದ್ದು, ರೈತರಿಗೂ ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೂ ತೊಂದರೆಯಾಗುತ್ತಿದೆ ಎಂದು ನಿಯೋಗದ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರು. ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಿ, ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮುರುಗೋಡದಲ್ಲಿ ಅಕ್ರಮ ಗಣಿಕಾರಿಕೆ ನೂರಾರು ಮರಗಳ ಮಾರಣ ಹೊಮ ಯಾಗಿರುವ ವಿಚಾರದ ಬಗ್ಗೆ ಜಂಟಿ ಪತ್ರಿಕಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕ ವಿಶ್ವನಾಥ್ ಪಾಟೀಲ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ್ ಮಾಡಲಗಿ ಅವರು, ಮಾಡನಾಡಿ ಬೈಲಹೊಂಗಲ ತಾಲೂಕಿನ ಮುರುಗೋಡ ಗ್ರಾಮದಲ್ಲಿ ಅಕ್ರಮವಾಗಿ ಗಣಿಗಾರಿಕೆ ಮಾಡುವುದಕ್ಕೆ ನೂರಾರು ಮರಗಳ ಮಾರನಹೋಮ ನಡೆಸಲಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು.

ಮಾಜಿ ಶಾಸಕ ವಿಶ್ವನಾಥ್ ಪಾಟೀಲ ಅವರು ಮಾತನಾಡಿ,ಮುರುಹೋಡ ಗ್ರಾಮದಲ್ಲಿ ಅಕ್ರಮ ಗಣಿಗಾರಿಕೆಗೆ ನೂರಾರು ಬೃಹತ್ ಗಾತ್ರದ ಮರಗಳನ್ನು ನೆಲಕ್ಕೆ ಉರುಳಿಸಿದ್ದಾರೆ. ಈ ಅಕ್ರಮದ ಹಿಂದೆ ಯಾರಿದ್ದಾರೆ ಎಂಬುದುದು ಕೂಡಲೇ ಜನತೆಗೆ ತಿಳಿಯಬೇಕು, ಈ ಅಕ್ರಮದ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಅಕ್ರಮ ಗಣಿಗಾರಿಕೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳೂ ಶಾಮಿಲಾಗಿದ್ದಾರಾ ಎಂದು ತಿಳಿಯಬೇಕೆಂದು ಆಕ್ರೋಶ ಹೋರ ಹಾಕಿದರು.

ನೂರಾರು ಮರಗಳ ಮಾರನಹೋಮ ಹಾಗೂ ಅಕ್ರಮ ಗಣಿಗಾರಿಕೆಗೆ ಮುಂದಾಗಿರುವವರು ವಿರುದ್ದ ಕೂಡಲೇ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಸಂಬಧಿಸಿದ ಅಧಿಕಾರಿಗಳ ವಿರುದ್ದ ಹಾಗೂ ಅಕ್ರಮದಲ್ಲಿ ಭಾಗಿ ಯಾಗಿದ್ದವರ ವಿರುದ್ದ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಮಾಜಿ ಶಾಸಕ ವಿಶ್ವನಾಥ ಪಾಟೀಲ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಬಿಜೆಪಿ ಮುಖಂಡ ಗುರು ಮೆಟಗುಡ್, ಸಚಿನ್ ದೇಸಾಯಿ ದಣಿ, ಲಕ್ಕಪ್ಪ ಕಾರ್ಗಿ, ಸದಾಶಿವ ಪಾಟೀಲ್, ರಾಜು ಹೊಸಟ್ಟಿ, ಮಹಾಂತೇಶ್ ಆಳಜಿ, ದ್ಯಾಮಣ್ಣ ಭಜಂತ್ರಿ, ಮಹದೇವ ಆಮಾತಿ, ರಮೇಶ ಯಲನಾಯಕರ ಹಾಗೂ ಮೌಲಾಸಾಹೇಬ್ ಮುಲ್ಲಾ ಸೇರಿದಂತೆ ಹಲವು ಮುಖಂಡರು ರೈತರು ಭಾಗಿಯಾಗಿದ್ದರು.

Must Read