ಅಕ್ರಮ ಹಣ ವರ್ಗಾವಣೆ : ಸರ್ವಣ ಸ್ಟೋರ್ಸ್‌ ನ 234 ಕೋಟಿ ಆಸ್ತಿ ಜಪ್ತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಬ್ಯಾಂಕ್‌ಗೆ ವಂಚಿಸಿದ ಆರೋಪದ ಮೇಲೆ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಚೆನ್ನೈನ ಸರ್ವಣ ಸ್ಟೋರ್ಸ್‌ನ (ಗೋಲ್ಡ್ ಪ್ಯಾಲೇಸ್) 234.75 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಗಳನ್ನು ಜಪ್ತಿ ಮಾಡಿದೆ. ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲ್ಯು) ಈ ವರ್ಷ ಏಪ್ರಿಲ್ 25 ರಂದು ಸಲ್ಲಿಸಿದ ಎಫ್‌ಐಆರ್ ಆಧರಿಸಿ ಇಡಿ ಪಿಎಂಎಲ್‌ಎ, 2002 ರ ಅಡಿಯಲ್ಲಿ ತನಿಖೆಯನ್ನು ಪ್ರಾರಂಭಿಸಿದೆ.

ಚೆನ್ನೈನಲ್ಲಿರುವ ಇಂಡಿಯನ್ ಬ್ಯಾಂಕ್‌ನ ಟಿ ನಗರ ಶಾಖೆಗೆ ವಂಚಿಸುವ ಕ್ರಿಮಿನಲ್ ಉದ್ದೇಶದಿಂದ ಪಲ್ಲಕುದುರೈ, ಪಿ ಸುಜಾತಾ ಮತ್ತು ವೈ ಪಿ ಶಿರವನ್ ಸೇರಿದಂತೆ ಅಂಗಡಿಯ ಪಾಲುದಾರರು ಅಪರಿಚಿತ ಸಾರ್ವಜನಿಕ ಸೇವಕರು ಮತ್ತು ಇತರರೊಂದಿಗೆ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಸರವಣ ಸ್ಟೋರ್ (ಗೋಲ್ಡ್ ಪ್ಯಾಲೇಸ್) ಸಂಸ್ಥೆಯು ತನ್ನ ಬ್ಯಾಲೆನ್ಸ್‌ ಶೀಟ್‌ ಅನ್ನು ತಿದ್ದುವ ಮೂಲಕ ಹೆಚ್ಚಿನ ಲಾಭ ತೋರಿಸಿ ಸಾಲ ಮಂಜೂರು ಮಾಡಲು ಅರ್ಜಿ ಸಲ್ಲಿಸಿದೆ. ಆದರೆ ಸಂಸ್ಥೆಯ ಮಾರಾಟದ ವರದಿ ಮತ್ತು ಕ್ರೆಡಿಟ್ ನಮೂದುಗಳ ನಡುವೆ ಭಾರೀ ವ್ಯತ್ಯಾಸವಿರುವುದು ತನಿಖೆಯಿಂದ ತಿಳಿದುಬಂದಿದೆ.

ಸಾಲವನ್ನು ಪಡೆಯುವ ಸಮಯದಲ್ಲಿ ಮುಂಬರುವ ಹಣಕಾಸು ವರ್ಷಗಳಲ್ಲಿ ನಿರೀಕ್ಷಿತ ವಹಿವಾಟಿನ ನಕಲಿ ಚಿತ್ರವನ್ನು ಪ್ರಸ್ತುತಪಡಿಸಿದೆ. ಇದಲ್ಲದೆ, ಇಂಡಿಯನ್ ಬ್ಯಾಂಕ್ ಅನ್ನು ವಂಚಿಸಲು ಸಂಸ್ಥೆಯು ಆಸ್ತಿ ಮೌಲ್ಯಮಾಪಕರು, ಬ್ಯಾಂಕ್ ಅಧಿಕಾರಿಗಳು ಮತ್ತು ಕೆಲವು ಖಾಸಗಿ ವ್ಯಕ್ತಿಗಳೊಂದಿಗೆ ಶಾಮೀಲಾಗಿ ನ್ಯಾಯೋಚಿತ ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚಿನ ಬೆಲೆಗೆ ಆಸ್ತಿಗಳನ್ನು ಖರೀದಿಸಲು ಪ್ರಸ್ತಾಪಿಸಿದೆ ಎನ್ನಲಾಗಿದೆ.

ಆರೋಪಿಗಳು ದಾಸ್ತಾನು ಹೆಚ್ಚಿಗೆ ನಮೂದಿಸಿರುವುದು, ಬ್ಯಾಂಕ್‌ಗೆ ತಿಳಿಯದಂತೆ ಸ್ವತ್ತುಗಳನ್ನು ವರ್ಗಾವಣೆ ಮಾಡುವುದು, ಅವಧಿ ಸಾಲ ಮರುಪಾವತಿಸಲು ಒಸಿಸಿ ಮಿತಿಯನ್ನು ಬಳಸುವುದು, ಮಂಜೂರಾಗದ ಹಣವನ್ನು ದುರುಪಯೋಗಪಡಿಸಿ ಮತ್ತು ಬೇರೆಡೆಗೆ ತಿರುಗಿಸುವುದು ಮತ್ತು ಇತರ ಅಕ್ರಮಗಳನ್ನು ಎಸಗಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಅಧಿಕಾರಿ ಹೇಳಿದ್ದು ಹೆಚ್ಚಿನ ತನಿಖೆ ಜಾರಿಯಲ್ಲಿರುವುದಾಗಿ ಮೂಲಗಳು ವರದಿ ಮಾಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!