ಅಕ್ರಮ ಹಣ ವರ್ಗಾವಣೆ ಪ್ರಕರಣ: ತನಿಖೆಗೆ ಹಾಜರಾದ ಜಾಕ್ವೆಲಿನ್​​ ಫರ್ನಾಂಡಿಸ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿಯಾಗಿರುವ ಬಾಲಿವುಡ್​ ನಟಿ ಜಾಕ್ವೆಲಿನ್​​ ಫರ್ನಾಂಡಿಸ್‌ ಇಂದು ಮುಂಬೈ ನಗರದ ಇಒಡಬ್ಲ್ಯು ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.

ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗ (EOW)ವು ಫರ್ನಾಂಡೀಸ್‌ಗೆ ಸೆಪ್ಟೆಂಬರ್ 14ರ ರಂದು ವಿಚಾರಣೆಗೆ ಹಾಜರಾಗುವಂತೆ ಮತ್ತೆ ಸಮನ್ಸ್ ಜಾರಿ ಮಾಡಿತ್ತು.
ಆರೋಪಿ ಸುಕೇಶ್​ನೊಂದಿಗಿನ ನಟಿ ಜಾಕ್ವೆಲಿನ್ ಹೊಂದಿರುವ ಸಂಬಂಧ, ಅವನಿಂದ ಪಡೆದ ಉಡುಗೊರೆ, ಸುಕೇಶ್‌ನನ್ನು ಎಷ್ಟು ಬಾರಿ ಭೇಟಿಯಾಗಿದ್ದರು, ಫೋನ್‌ನಲ್ಲಿ ಎಷ್ಟು ಬಾರಿ ಸಂಪರ್ಕಿಸಿದ್ದರು ಎಂಬ ಬಗ್ಗೆ ಪ್ರಶ್ನೆಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದರು.

ಜಾಕ್ವೆಲಿನ್, ಸುಕೇಶ್ ಇಬ್ಬರಿಗೂ ಪರಿಚಯ ಇರುವುದರಿಂದ ಸುಕೇಶ್ ಮತ್ತು ಜಾಕ್ವೆಲಿನ್​​ ಸಂಪರ್ಕಿಸಲು ಪಿಂಕಿ ಇರಾನಿ ಸಹಾಯ ಮಾಡಿದ್ದಾರೆಂದು ತಿಳಿದು ಬಂದಿದೆ. ಈ ಹಿನ್ನೆಲೆ ಆರ್ಥಿಕ ಅಪರಾಧಗಳ ವಿಭಾಗವು ಪಿಂಕಿ ಇರಾನಿ ಅವರಿಗೂ ತನಿಖೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದು ಅವರೂ ಕೂಡ ಇಒಡಬ್ಲ್ಯು ಕಚೇರಿ ತಲುಪಿದ್ದಾರೆ.

ಇದಕ್ಕೂ ಮುನ್ನ ಜಾರಿ ನಿರ್ದೇಶನಾಲಯ (ಇಡಿ) ಆರೋಪಿ ಸುಕೇಶ್ ಅವರನ್ನು ಒಳಗೊಂಡ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾಕ್ವೆಲಿನ್ ಅವರನ್ನು ಆರೋಪ ಪಟ್ಟಿಯಲ್ಲಿ ಹೆಸರಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!