Friday, July 1, 2022

Latest Posts

ಗೋಮಾಂಸ ಅಕ್ರಮ ಮಾರಾಟ: ಓರ್ವನ ಬಂಧನ

ಹೊಸದಿಗಂತ ವರದಿ, ಮಡಿಕೇರಿ:

ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ, ಗೋವಿನ ಮಾಂಸವನ್ನು ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ನಾಪೋಕ್ಲು ಪೊಲೀಸರು ಪತ್ತೆ ಹಚ್ಚಿ ಓರ್ವನನ್ನು ಬಂಧಿಸಿದ್ದಾರೆ.
ಕೊಟ್ಟಮುಡಿ ಗ್ರಾಮದ ನಿವಾಸಿ ಟಿ.ಎ.ಮೊಯಿದು(32) ಎಂಬಾತನೇ ಬಂಧನಕ್ಕೊಳಗಾದವನಾಗಿದ್ದು, ಆತನ ಬಳಿ ಇದ್ದ 20 ಕೆ.ಜಿಯಷ್ಟು ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ.
ಸಂತೆ ದಿನವಾದ ಸೋಮವಾರ, ಬೇತು ಗ್ರಾಮದ ಕಾರೇಕಾಡು ರಸ್ತೆಯ ಜಂಕ್ಷನ್ ಬಳಿ ಬಕೆಟ್ ಒಂದರಲ್ಲಿ ಮಾಂಸ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದರು.
ಠಾಣಾಧಿಕಾರಿ ಸದಾಶಿವ, ಸಿಬ್ಬಂದಿಗಳಾದ ಶರತ್ ಕುಮಾರ್, ಪಂಚಲಿಂಗಪ್ಪ, ನಾಗರಾಜು ಹಾಗೂ ಚಾಲಕ ಶರೀಫ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss