ಹೇಮಾವತಿ ನದಿ ದಡದಲ್ಲಿ ಅಕ್ರಮ ಮರಳು ಸಾಗಣೆ: ಏಳು ವಾಹನಗಳ ವಶ

 

ಹೊಸದಿಗಂತ ವರದಿ ಸಕಲೇಶಪುರ:

ತಾಲೂಕಿನ ಬೈಕೆರೆ ಹಾಗೂ ಮಳಲಿ ಗ್ರಾಮದ ಹೇಮಾವತಿ ನದಿ ದಡದಲ್ಲಿ ಅಕ್ರಮವಾಗಿ ಮರಳು ಸಾಗಣೆ ಮಾಡುತಿದ್ದ ಅಡ್ಡೆಯ ಮೇಲೆ ಪೋಲಿಸರು ಇಂದು ಬೆಳ್ಳಂಬೆಳಗ್ಗೆ ದಾಳಿಸಿ ಏಳು ಪಿಕಪ್ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಸಕಲೇಶಪುರ ತಾಲೂಕಿನ ಬೈಕೆರೆ ಹಾಗೂ ಮಳಲಿ ಗ್ರಾಮದಲ್ಲಿ ಅಕ್ರಮವಾಗಿ ಮರಳು ಸಾಗಣೆ ಮಾಡಲಾಗುತ್ತಿದೆ ಎಂದು ದೊರೆತ ಖಚಿತ ಮಾಹಿತಿ ಮೇರೆಗೆ ಡಿ ವೈ ಎಸ್ ಪಿ ಪ್ರಮೋದ್ ಜೈನ್ ಹಾಗೂ ಪಿಎಸ್ಐ ಜಗದೀಶ್ ನೇತೃತ್ವದಲ್ಲಿ ಇಂದು ಬೆಳ್ಳಂಬೆಳಗ್ಗೆ ಮರಳು ಅಡ್ಡೆ ಮೇಲೆ ಮಿಂಚಿನ ದಾಳಿ ನಡಸಿದ್ದಾರೆ. ಈ ವೇಳೆ ತಾಲ್ಲೂಕಿನ, ಬೈಕೆರೆ ಗ್ರಾಮದಲ್ಲಿ 6 ಪಿಕಪ್ ಹಾಗೂ ಮಳಲಿ ಗ್ರಾಮದಲ್ಲಿ ಒಂದು ಪಿಕಪ್ ವಾಹನ ಸೇರಿದಂತೆ ಮರಳು‌ ಸಮೇತ ವಶಕ್ಕೆ ಪಡೆದಿದ್ದಾರೆ.

ಕಾರ್ಯಾಚರಣೆಯಲ್ಲಿ ಡಿವೈಎಸ್‌ಪಿ ಪ್ರಮೋದ್ ಜೈನ್, ಪಿಎಸ್ಐ ಜಗದೀಶ್, ಎ.ಎಸ್ಐ ಗಳಾದ ಪ್ರಕಾಶ್ ನಾಯಕ್, ವಜೀರ್, ಪೊಲೀಸ್ ಸಿಬ್ಬಂದಿಗಳಾದ ಶ್ರೀಕಂಠ ಸ್ವಾಮಿ, ರೇವಣ್ಣ, ಕೀರ್ತಿ, ಕೃಷ್ಣ ನಾಯಕ್, ಅಶೋಕ್, ಗೋಪಾಲ್, ಮಧು, ಶಿವಕುಮಾರ್,ಅರುಣ್ ಕುಮಾರ್, ರಂಗಸ್ವಾಮಿ, ಅಭಿಷೇಕ್ , ರಘು ಹರೀಶ್ ಸೇರಿದಂತೆ ಇತರರು ಹಾಜರಿದ್ದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!