ಹೊಸದಿಗಂತ ವರದಿ, ಬನವಾಸಿ:
ಒಮಿನಿಯಲ್ಲಿ ಅಕ್ರಮವಾಗಿ ಸಾಗುವಾನಿ ಮರದ ತುಂಡುಗಳನ್ನು ಸಾಗಿಸುತ್ತಿರುವ ವೇಳೆ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಸೋಮವಾರ ರಾತ್ರಿ ಇಬ್ಬರನ್ನು ಬಂಧಿಸಿದ್ದಾರೆ.
ಹಲಸಿನಕೊಪ್ಪದ ಪಾಂಡುರಂಗ ಪುಟ್ಟಯ್ಯ ಆಚಾರಿ, ಉಂಚಳ್ಳಿಯ ಗಣಪತಿ ಜೋಗಿ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಕೊಡಲಿಯಲ್ಲಿ ಕೆತ್ತಿದ 7 ಕ್ಯೂಬಿಕ್ ಮೀಟರ್ ಸಾಗುವನಿ ತುಂಡು, ಸಾಗಾಟಕ್ಕೆ ಬಳಸಿದ ಓಮಿನಿ ವಶಪಡಿಸಿಕೊಳ್ಳಲಾಗಿದೆ. ಡಿಎಫ್ಒ ಡಾ. ಅಜಯ ಜೆ. ಆರ್. ಅವರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಬನವಾಸಿ ಆರ್ ಎಫ್ ಓ ವರದರಂಗನಾಥ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.