ಕೇರಳಕ್ಕೆ ಅಕ್ರಮ ಯೂರಿಯಾ ರಸ ಗೊಬ್ಬರ ಸಾಗಾಟ: ಅಧಿಕಾರಿಗಳಿಂದ ದಾಳಿ, ಓರ್ವ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೇರಳ ರಾಜ್ಯಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ೫.೫೦ ಲಕ್ಷ ರೂ. ಬೆಲೆಯ ಯೂರಿಯಾ ರಸ ಗೊಬ್ಬರವನ್ನು ಜಿಲ್ಲಾಡಳಿತ ಹಾಗೂ ಕೃಷಿ ಜಾಗ್ರತ ದಳದ ಅಧಿಕಾರಿಗಳು ವಶಕ್ಕೆ ಪಡೆದು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಕೃಷಿ ಜಾಗೃತದಳದ ಸಹಾಯಕ ಕೃಷಿ ನಿರ್ದೇಶಕ ಎಸ್.ವೆಂಕಟೇಶ ಚವ್ಹಾಣ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. ತರೀಕೆರೆ ತಾಲೂಕಿನ ಲಿಂಗದಹಳ್ಳಿಯ ಚೆಕ್ ಪೋಸ್ಟಿನಲ್ಲಿರುವ ಸಿದ್ದಿ ವಿನಾಯಕ ಆಗ್ರೋ ಸೆಂಟರ್‌ನ ಮಾಲೀಕ ಎನ್.ಮಧುಸೂಧನ್ ಎನ್ ಹಾಸನದ ಅಕ್ಷಯ ಟ್ರೇಡಿಂಗ್ ಕಂಪನಿಯಿಂದ ಇವರಿಂದ ಸರಬರಾಜು ಪಡೆದ ಐಪಿಎಲ್ ಕಂಪನಿ ಗೆ ಸೇರಿದ ೩೧೧ ಯೂರಿಯಾ ರಸಗೊಬ್ಬರ ಚೀಲಗಳು ಮತ್ತು ಎಂಸಿಎಫ್ ಸ್ಪಿಕ್ ಕಂಪನಿಗೆ ಸೇರಿದ ೨೬ ಯೂರಿಯಾ ತುಂಬಿದ ರಸಗೊಬ್ಬರ ಚೀಲಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು.

ರಸಗೊಬ್ಬರ ಚೀಲಗಳನ್ನು ಕೇರಳ ರಾಜ್ಯದ ಲಾರಿ( ಕೆಎಲ್-೫೬ ಹೆಚ್ ೪೦೨೪) ಯಲ್ಲಿ ಕೈಗಾರಿಕಾ ಉದ್ದೇಶಕ್ಕೆ ಬಳಕೆ ಮಾಡಲು ಕೇರಳಕ್ಕೆ ಸಾಗಾಣಿಕೆ ಮಾಡಲು ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಲಾಗಿದೆ.

ಗೊಬ್ಬರ ಸಾಗಿಸುತ್ತಿದ್ದ ಲಾರಿ ಮತ್ತು ರಸಗೊಬ್ಬರ ಜಪ್ತಿ ಮಾಡಿ, ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದ್ದು, ಆರೋಪಿಯನ್ನು ಲಿಂಗದಹಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ಶಶಿಕುಮಾರ್ ಬಂಧಿಸಿ ವಿಚಾರಣೆ ನಡೆಸುತ್ತಿರುತ್ತಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!