Wednesday, June 7, 2023

Latest Posts

ಡಿ.ಕೆ ಶಿವಕುಮಾರ್ ಗೆ ಅನಾರೋಗ್ಯ: ವಿಶ್ರಾಂತಿಗೆ ವೈದ್ಯರ ಸೂಚನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಲು ಸಿದ್ಧತೆ ನಡೆಸುತ್ತಿದ್ದು, ಇದರ ಭಾಗವಾಗಿ ಸಿಎಂ ಆಯ್ಕೆ ದೊಡ್ಡ ತಲೆನೋವು ಪರಿಣಮಿಸಿದೆ.
ಇದರ ನಡುವೆ ಸಭೆಗಾಗಿ ದೆಹಲಿಗೆ ತೆರಳಬೇಕಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಅನಾರೋಗ್ಯ ಕಾಣಿಸಿಕೊಂಡಿದೆ.ಅವರ ನಿವಾಸಕ್ಕೆ ವೈದ್ಯರು ಭೇಟಿ ನೀಡಿ, ತಪಾಸಣೆ ನಡೆಸಿ, ಚಿಕಿತ್ಸೆ ನೀಡಿರುವುದಾಗಿ ತಿಳಿದು ಬಂದಿದೆ.

ಒಂದೆಡೆ ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿ ಆಯ್ಕೆಗಾಗಿ ಕಸರತ್ತು ನಡೆಯುತ್ತಿದ್ದರೇ, ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅನಾರೋಗ್ಯಕ್ಕೆ ಒಳಗಾಗಿರುವುದಾಗಿ ತಿಳಿದು ಬಂದಿದೆ.

ಸದಾಶಿವನಗರದ ಡಿಕೆ ಶಿವಕುಮಾರ್ ನಿವಾಸಕ್ಕೆ ಅವರ ಫ್ಯಾಮಿಲಿ ವೈದ್ಯ ಡಾ.ಭಗವಾನ್ ಭೇಟಿ ನೀಡಿ, ಡಿಕೆಶಿ ಆರೋಗ್ಯ ತಪಾಸಣೆ ನಡೆಸಿದರು. ಆ ವೇಳೆ ಅವರಿಗೆ ಬಿಪಿ 140 ಇರುವುದಾಗಿ ತಿಳಿದು ಬಂದಿದ್ದು, ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ.
ಇಷ್ಟು ಅಲ್ಲದೆ ಡಿ.ಕೆ ಶಿವಕುಮಾರ್ ಹೊಟ್ಟೆ ನೋವಿನಿಂದ ಕೂಡ ಬಳಲುತ್ತಿದ್ದು, ಅವರಿಗೆ ಮಾತ್ರೆ ನೀಡಿ, ವಿಶ್ರಾಂತಿಯನ್ನು ಕೆಲ ದಿನಗಳ ಕಾಲ ಪಡೆಯುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!