ನಾನು ಫಿಟ್: ವೈದ್ಯಕೀಯ ವರದಿ ಬಿಡುಗಡೆ ಮಾಡಿದ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ವೈದ್ಯಕೀಯ ಪರೀಕ್ಷಾ ವರದಿ ಬಿಡುಗಡೆ ಮಾಡಿದ್ದೂ, ಆರೋಗ್ಯ ಅತ್ಯುತ್ತಮವಾಗಿದೆ ಮತ್ತು ಅವರ ಅರಿವಿನ ಸಾಮರ್ಥ್ಯಗಳು ಅಸಾಧಾರಣವಾಗಿವೆ ಎಂದುಟ್ರಂಪ್ ಅವರ ಚುನಾವಣಾ ನಿರ್ವಾಹಕರು ಹೇಳಿದ್ದಾರೆ.

ಟ್ರಂಪ್ ಅವರು ಆಗಾಗ ಆಡುವ ತಪ್ಪು ಮಾತುಗಳು ಹಾಗೂ ಅವರ ವಯಸ್ಸಿನ ಬಗ್ಗೆ ಚರ್ಚೆಗಳು ನಡೆದಿರುವ ಮಧ್ಯೆ ಅವರ ಚುನಾವಣಾ ನಿರ್ವಾಹಕರು ಟ್ರಂಪ್ ಸಂಪೂರ್ಣ ಆರೋಗ್ಯವಾಗಿದ್ದಾರೆ ಎಂದು ಡಾಕ್ಟರ್ ಸರ್ಟಿಫಿಕೇಟ್​ ತೋರಿಸಿದ್ದಾರೆ.

2021 ರಿಂದ ಟ್ರಂಪ್ ಅವರ ವೈಯಕ್ತಿಕ ವೈದ್ಯರೆಂದು ಹೇಳಿಕೊಂಡಿರುವ ಬ್ರೂಸ್ ಅರಾನ್ವಾಲ್ಡ್ ಆರೋಗ್ಯ ವರದಿ ನೀಡಿದ್ದಾರೆ ಎಂದು ಸಿಎನ್‌ಎನ್ ವರದಿ ಮಾಡಿದೆ.

ಇತ್ತೀಚೆಗೆ ಅಂದರೆ ಟ್ರಂಪ್ ಅವರಿಗೆ ಸಮಗ್ರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಅವರ ಹೃದಯರಕ್ತನಾಳದ ಪರೀಕ್ಷೆಗಳಲ್ಲಿ ಎಲ್ಲವೂ ಸಾಮಾನ್ಯವಾಗಿದ್ದು, ಕ್ಯಾನ್ಸರ್ ಸ್ಕ್ರೀನಿಂಗ್ ಪರೀಕ್ಷೆಗಳು ನಕಾರಾತ್ಮಕವಾಗಿದ್ದವು ಮತ್ತು ಟ್ರಂಪ್ ತಮ್ಮ ತೂಕವನ್ನು ಕಡಿಮೆ ಮಾಡಿದ್ದಾರೆ ಎಂದು ಅರಾನ್ವಾಲ್ಡ್ ಬರೆದಿದ್ದಾರೆ.ಆದಾಗ್ಯೂ ಟ್ರಂಪ್ ಮೇಲೆ ಯಾವೆಲ್ಲ ಆರೋಗ್ಯ ಪರೀಕ್ಷೆಗಳನ್ನು ನಡೆಸಲಾಗಿದೆ ಎಂಬ ಮಾಹಿತಿ ಈ ವರದಿಯಲ್ಲಿ ಇಲ್ಲ.

2015 ರಲ್ಲಿ ಟ್ರಂಪ್ ಅವರ ಅಂದಿನ ಪ್ರಚಾರ ನಿರ್ವಾಹಕರು ಹೆರಾಲ್ಡ್ ಬಾರ್ನ್​ಸ್ಟೀನ್ ಬರೆದ ಇದೇ ರೀತಿಯ ವರದಿಯನ್ನು ಬಿಡುಗಡೆ ಮಾಡಿದ್ದರು. ಅವರ ದೈಹಿಕ ಶಕ್ತಿ ಮತ್ತು ತ್ರಾಣ ಅಸಾಧಾರಣವಾಗಿದೆ ಎಂದು ವರದಿ ಹೇಳಿತ್ತು. ಆದರೆ ಟ್ರಂಪ್ ಅವರೇ ವರದಿಯಲ್ಲಿ ಏನು ಬರೆಯಬೇಕೆಂಬುದನ್ನು ನನಗೆ ಹೇಳಿದ್ದರು ಎಂದು ಕೆಲಕಾಲದ ನಂತರ ಬಾರ್ನ್​ಸ್ಟೀನ್ ಹೇಳಿಕೊಂಡಿದ್ದರು.

2024 ರ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಅಭ್ಯರ್ಥಿಯಾಗಿರುವ ಫ್ಲೋರಿಡಾ ಗವರ್ನರ್ ರಾನ್ ಡಿಸಾಂಟಿಸ್ ಅವರು ಹಾಲಿ ಅಧ್ಯಕ್ಷ ಜೋ ಬೈಡನ್​ ಮತ್ತು ಟ್ರಂಪ್ ಮತ್ತೊಂದು ಅವಧಿಗೆ ಶ್ವೇತಭವನಕ್ಕೆ ಸ್ಪರ್ಧಿಸಲು ತುಂಬಾ ವೃದ್ಧರಾಗಿದ್ದಾರೆ ಎಂದು ಹೇಳಿದ ಒಂದು ದಿನದ ನಂತರ ಸೋಮವಾರ ಈ ಹೇಳಿಕೆ ಬಿಡುಗಡೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!