ನಾನು ಭಾರತೀಯನಾಗಿ ಇಲ್ಲಿದ್ದೇನೆ: ಭಾರತ್ ಜೋಡೋ ಯಾತ್ರೆಯಲ್ಲಿ ಮಲ್ ಹಾಸನ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಭಾರತ್ ಜೋಡೋ ಯಾತ್ರೆಯಲ್ಲಿ ನಟ ಕಮಲ್ ಹಾಸನ್ ಭಾಗಿಯಾಗಿದ್ದಾರೆ .

ಯಾತ್ರೆಯ ವೇಳೆ ಮಾತನಾಡಿದ ಅವರು, ಹಲವರು ನನ್ನನ್ನು ಕೇಳುತ್ತಾರೆ. ನಾನು ಯಾಕೆ ಇಲ್ಲಿದ್ದೇನೆ ಎಂದು. ನಾನು ಭಾರತೀಯನಾಗಿ ಇಲ್ಲಿದ್ದೇನೆ. ನನ್ನ ತಂದೆ ಕಾಂಗ್ರೆಸ್ಸಿಗರಾಗಿದ್ದರು. ನಾನು ವಿವಿಧ ಸಿದ್ಧಾಂತಗಳನ್ನು ಹೊಂದಿದ್ದೇನೆ. ನನ್ನದೇ ಆದ ರಾಜಕೀಯ ಪಕ್ಷವನ್ನು ಪ್ರಾರಂಭಿಸಿದ್ದೇನೆ. ಆದರೆ ದೇಶದ ವಿಷಯಕ್ಕೆ ಬಂದಾಗ, ಎಲ್ಲಾ ರಾಜಕೀಯ ಬದಿಗೊತ್ತಿ ಇಲ್ಲಿಗೆ ಬಂದಿದ್ದೇನೆ ಎಂದು ಅವರು ಹೇಳಿದ್ದಾರೆ.

ಇದಕ್ಕೂ ಮುನ್ನ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಅವರ ಪುತ್ರಿ, ಅಳಿಯ ಮತ್ತು ಮೊಮ್ಮಕ್ಕಳು ರಾಹುಲ್ ಗಾಂಧಿ ಅವರೊಂದಿಗೆ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!