Friday, September 22, 2023

Latest Posts

ಸಚಿವ ಸ್ಥಾನ ಸಿಕ್ಕಿಲ್ಲ ಅಂತ ಬೇಜಾರಗಿಲ್ಲ: ಶಾಸಕ ರಾಯರೆಡ್ಡಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಸಚಿವ ಸ್ಥಾನ ಸಿಕ್ಕಿಲ್ಲ ಅಂತ ನನಗೇನು ಬೇಜಾರಗಿಲ್ಲ ಮತ್ತೆ ನಾನು ಯಾವತ್ತು ಬೇಜಾರ ಮಾಡುವುದಿಲ್ಲ . ಸಚಿವ ಸ್ಥಾನದ ಅವಶ್ಯಕತೆಯೂ ಇಲ್ಲ, ಮುಂದೆ ಮಂತ್ರಿ ಮಾಡೋದು ಕೂಡ ಬೇಡ. ಈ ಬಗ್ಗೆ ಬೇಕಾದರೆ ಬರೆದುಕೊಡುತ್ತೇನೆ ಎಂದು ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.

ಸಿಎಂ ಅವರೇ ನಂಗೆ ಕ್ಯಾಬಿನೆಟ್ ದರ್ಜೆ ಸ್ಥಾನ ನೀಡಲು ಸಿದ್ದರಾಗಿದ್ದರು. ನಾನೇ ಬೇಡ ಅಂದಿದ್ದೇನೆ, ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನ ನೀಡುತ್ತೇನೆ ಅಂದಿದ್ದರು. ನಮಗೆ ಯಾವುದೇ ಬೇಜಾರಿಲ್ಲ. ನಾವು ಯಾವುದೇ ಕಾರಣಕ್ಕೆ ಬೇಸರ ಮಾಡಿಕೊಳ್ಳುವುದಿಲ್ಲ. ಪತ್ರ ಬರೆದಿದ್ದು ಶಾಸಕರು- ಸಚಿವರ ಮಧ್ಯೆ ಸಮನ್ವಯ ಆಗಲಿ ಅಂತ. ಎಂದು ತಿಳಿಸಿದರು.

ಕಲಬುರುಗಿಯಲ್ಲಿ ಬಿ.ಆರ್.ಪಾಟೀಲ್ ಪ್ರಿಯಾಂಕ್ ಖರ್ಗೆ ಮಧ್ಯೆ ಸಮನ್ವಯ ಕೊರತೆಯಾಗಿರಬಹುದು ಅದು ನಂಗೆ ಗೊತ್ತಿಲ್ಲ. ಬಿ.ಆರ್.ಪಾಟೀಲ್ ಗೂ ಮಂತ್ರಿ ಸ್ಥಾನ ಸಿಕ್ಕಿಲ್ಲ ಅಂತ ಬೇಜಾರಿಲ್ಲ. ಅವರಿಗೆ ಗೌರವ ಸಿಕ್ತಿಲ್ಲ ಅಂತ ಬೇಜಾರಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!