ನನ್ನ ಮಗನ ಬಗ್ಗೆ ಹೆಮ್ಮೆಯಿದೆ, ಆತ ಕೆಟ್ಟವನಾಗಿದ್ದರೆ ಇಷ್ಟೊಂದು ಮಂದಿ ಸೇರುತ್ತಿರಲಿಲ್ಲ…

ಹೊಸದಿಗಂತ ಆನ್‌ಲೈನ್ ಡೆಸ್ಕ್

ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಹಿನ್ನಲೆಯಲ್ಲಿ ಅವರ ಕುಟುಂಬ ಸದಸ್ಯರನ್ನು ಭೇಟಿಯಾದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಸಾಂತ್ವನ ಹೇಳಿದರು.
ಹರ್ಷ ಯಾರ ತಂಟೆಗೂ ಹೋದವನಲ್ಲ. ನನ್ನ ಮಗ ಕೆಟ್ಟವನಾಗಿದ್ದರೆ ಆತನ ಅಂತಿಮ ಯಾತ್ರೆಯಲ್ಲಿ ಇಷ್ಟೊಂದು ಮಂದಿ ಖಂಡಿತಾ  ಸೇರುತ್ತಿರಲಿಲ್ಲ. ಆತನಿಗೆ ದೇಶಾಭಿಮಾನ ತುಂಬಾ ಇತ್ತು. ಸೇನೆಯ ಬಗ್ಗೆ ಅಪಾರವಾದ ಗೌರವವಿತ್ತು. ನನ್ನ ಮಗನ ಬಗ್ಗೆ ನನಗೆ ಹೆಮ್ಮೆಯಿದೆ. ಅವನು ಹಿಂದೂ ಪರ ಕೆಲಸ ಮಾಡುತ್ತಿದ್ದನೇ ಹೊರತೂ ಬೇರೆ ಯಾರಿಗೂ ಅನ್ಯಾಯ ಮಾಡಿಲ್ಲ. ಯಾರ ಬಳಿ ಒಂದು ರೂಪಾಯಿಗೂ ಕೈ ಚಾಚಿಲ್ಲ… ಎಂದು ಕಣ್ಣೀರಾದರು ಹರ್ಷ ಅವರ ತಂದೆ ನಾಗರಾಜ್ ಜಿಂಗಾಡೆ.
ಇದೇ ಸಂದರ್ಭ ತಮ್ಮ ಸಹೋದರನ ಸಾವಿನ ನ್ಯಾಯ ಕೊಡಿಸುವಂತೆ ಗೃಹ ಸಚಿವರಲ್ಲಿ ಹರ್ಷ ಅವರ ಸಹೋದರಿ ಅಶ್ವಿನಿ ಮನವಿ ಮಾಡಿಕೊಂಡರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!