ಆತ ಜೈ ಶ್ರೀರಾಮ್, ಶ್ರೀರಾಮ್ ಎನ್ನುತ್ತಲೇ ಪ್ರಾಣ ಬಿಟ್ಟ…

ಹೊಸದಿಗಂತ ಆನ್‌ಲೈನ್ ಡೆಸ್ಕ್

“ಹರ್ಷನನ್ನು ಹತ್ಯೆ ಮಾಡಿದವರು ಯಾರೋ ಗೊತ್ತಿಲ್ಲ… ಆದರೆ ನಮ್ಮ ಕುಟುಂಬಕ್ಕೆ ಮಾತ್ರ ನ್ಯಾಯ ಬೇಕು… ಆ ನ್ಯಾಯ ಸಿಗುವುದಿಲ್ಲ ಎಂದಾದರೆ ನನ್ನ ಹಿಂದು ಸಹೋದರರೇ ಏನೋ ಒಂದು ತೀರ್ಮಾನಿಸುತ್ತಾರೆ ಎಂದು ಹೇಳಬೇಕಾಗುತ್ತದೆ” ತಮ್ಮ ವೈಯಕ್ತಿಕ ನೋವು, ಆಘಾತಗಳ ನಡುವೆಯೂ ಹೀಗೆ ಪ್ರತಿಕ್ರಿಯಿಸಿದವರು ಶಿವಮೊಗ್ಗದ ಭಜರಂಗದಳದ ಮೃತ ಕಾರ್ಯಕರ್ತ ಹರ್ಷ ಅವರ ಸಹೋದರಿ ಅಶ್ವಿನಿ.
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆತ ಜೈ ಶ್ರೀರಾಮ್, ಶ್ರೀರಾಮ್ ಎನ್ನುತ್ತಲೇ ತಮ್ಮ ಪ್ರಾಣ ಬಿಟ್ಟ. ಭಾನುವಾರ ನಾನು ಚಿಕ್ಕಮಗಳೂರಿಗೆ ಹೋಗಿದ್ದೆ. ನಿನ್ನ ತಮ್ಮನ ಮೇಲೆ ಯಾರೋ ಹಲ್ಲೆ ಮಾಡಿದ್ದಾರೆ ಎಂದು ಫೋಟೋ, ವೀಡಿಯೋ ಕಳಿಸಿ  ಕೆಲವರು ತಿಳಿಸಿದರು. ನಾನು ಆಘಾತಕ್ಕೊಳಗಾದೆ. ಈಗ ನಾವು ಯಾರ ಬಳಿ ನ್ಯಾಯ ಕೇಳಬೇಕು? ಎಂದು ಪ್ರಶ್ನಿಸಿದರು ಅಶ್ವಿನಿ.
ನನ್ನ ತಮ್ಮ ಯಾರಿಗೂ ತೊಂದರೆ ಕೊಟ್ಟವನಲ್ಲ. ಹಾಗಿದ್ದರೂ ಹತ್ಯೆ ನಡೆದಿದೆ. ಇದು ಯಾಕಾಯಿತು ಎಂಬುದು ಅರ್ಥವಾಗುತ್ತಿಲ್ಲ. ನಮ್ಮ ಕುಟುಂಬಕ್ಕೆ ದಯವಿಟ್ಟು ನ್ಯಾಯ ಒದಗಿಸಿಕೊಡಿ ಎಂದು ಆಗ್ರಹಿಸಿದರು ಅಶ್ವಿನಿ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!