ಭಾರತದ 5 ಟ್ರಿಲಿಯನ್ ಡಾಲರ್ ಅರ್ಥವ್ಯವಸ್ಥೆ ಸಾಧನೆ ಬಗ್ಗೆ ಅನುಮಾನಪಟ್ಟಿದ್ದ ಐಎಂಎಫ್ ಈಗ ರಾಗ ಬದಲಿಸಿದೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತವು 5 ಟ್ರಿಲಿಯನ್‌ ಅರ್ಥವ್ಯವಸ್ಥೆಯಾಗುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಅಂತರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಈಗ ತನ್ನ ಮಾತು ಬದಲಿಸಿದ್ದು ತನ್ನ ಆರ್ಥಿಕ ವರದಿಯಲ್ಲಿ ಭಾರತದ ಕುರಿತು ಹೇಳಿಕೆಯನ್ನು ಬದಲಾಯಿಸಿದೆ.

ಐಎಂಎಫ್ ಈ ಹಿಂದೆ ಪ್ರಕಟಿಸಿದ್ದ ವರದಿಯಲ್ಲಿ ಭಾರತವು 2029ರಲ್ಲಿ 5 ಟ್ರಿಲಿಯನ್‌ ಅರ್ಥಿಕತೆಯಾಗಬಹುದು ಎಂದಿತ್ತು. ಆದರೀಗ ಅದನ್ನು ಪರಿಷ್ಕರಿಸಿ 2026-27ರಲ್ಲೇ ಅಂದ್ರೆ ಎರಡು ವರ್ಷ ಮೊದಲೇ 5 ಟ್ರಿಲಿಯನ್‌ ಆರ್ಥಿಕತೆಯಾಗಲಿದೆ ಎಂದಿದೆ.

ವರದಿಗಳು ಹೇಳುವ ಪ್ರಕಾರ, ಐಎಂಎಫ್ ವರದಿಯು ಭಾರತ ಮತ್ತು ಯುಎಸ್ ನಡುವಿನ ಹಣದುಬ್ಬರ ವ್ಯತ್ಯಾಸಗಳು ಮತ್ತು ವಿನಿಮಯ ದರಗಳ ಊಹೆಗಳನ್ನಧಾರಿಸಿದೆ. ಅದು ಡಾಲರ್-ರೂಪಾಯಿ ವಿನಿಮಯ ದರದ ಮೇಲೆ ತನ್ನ ಗಮನವನ್ನು ಹೆಚ್ಚು ಕೇಂದ್ರೀಕರಿಸಿದೆಯೇ ಹೊರತು ಭಾರತದ ಆರ್ಥಿಕ ಬೆಳವಣಿಗೆಗಳನ್ನು ಗಮನಕ್ಕೆ ತೆಗೆದುಕೊಂಡಿಲ್ಲ. ಡಾಲರ್‌ ಎದುರು ರುಪಾಯಿಯ ಮೌಲ್ಯವು ₹94ಕ್ಕೆ ಕುಸಿಯುತ್ತದೆ ಎಂಬ ಊಹೆಯನ್ನು ಆಧರಿಸಿ ಐಎಂಎಫ್ ಭಾರತದ ಆರ್ಥಿಕತೆಯ ಬಗ್ಗೆ ಭವಿಷ್ಯ ನುಡಿದಿತ್ತು. ಆದರೆ ಈಗ ಊಹೆ ಬದಲಾಗಿದೆ. ರೂಪಾಯಿ ಮೌಲ್ಯವು ₹84ಕ್ಕೆ ಕುಸಿಯಬಹುದು ಎನ್ನಲಾಗಿದೆ. ಇದರ ಬೆನ್ನಲ್ಲೇ ಐಎಂಎಫ್ ಕೂಡ ತನ್ನ ವರದಿಯನ್ನು ಕೂಡ ಬದಲಾಯಿಸಿದೆ.

ಅಲ್ಲದೇ ಈ ಹಿಂದೆ ತಲಾವಾರು ಜಿಡಿಪಿಯಲ್ಲಿ ಬಾಂಗ್ಲಾದೇಶವು ಭಾರತಕ್ಕಿಂತ ಮುಂದೆಯಿದೆ ಎಂದು ಐಎಂಎಫ್ ಹೇಳಿತ್ತು ಆದರೀಗ ಈ ಮಾತನ್ನೂ ಕೂಡ ಬದಲಾಯಿಸಿದ್ದು ಭಾರತದ ಜಿಡಿಪಿಯು ಬಾಂಗ್ಲಾದೇಶಕ್ಕಿಂತ ಮುಂದಿರುತ್ತದೆ ಎಂದು ಐಎಂಎಫ್ ರಾಗ ಬದಲಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!