ಯುಎಸ್‌ ಏರ್‌ಲೈನ್ಸ್‌ನಲ್ಲಿ 95ವರ್ಷದ ಹಿರಿಯಜ್ಜನಿಗೆ ಬಹುದೊಡ್ಡ ಸಪ್ರೈಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಯುಎಸ್‌ ಏರ್‌ಲೈನ್ಸ್‌ನಲ್ಲಿ 95 ವರ್ಷ ವಯಸ್ಸಿನ ವೃದ್ಧರೊಬ್ಬರಿಗೆ ಹುಟ್ಟ ಹಬ್ಬ ಆಚರಣೆ ಮಾಡುವ ಮೂಲಕ ಬಹುದೊಡ್ಡ ಸಪ್ರೈಸ್‌ ನೀಡಿದ್ದಾರೆ. ಜ್ಯಾಕ್ ಮೆಕಾರ್ಥಿ ಎಂದು ಹೆಸರು ಕೂಗಿದ ಗಗನಸಖಿ ಇಂದು ನಮ್ಮ ವಿಮಾನದಲ್ಲಿ ನೀವು ಪ್ರಯಾಣ ಮಾಡುತ್ತಿರುವುದು ನಮಗೆ ಸಂತೋಷತಂದಿದೆ. ನಮ್ಮ ಕಡೆಯಿಂದ ನಿಮಗೆ ಹುಟ್ಟುಹಬ್ಬದ ಶುಭಾಷಯಗಳು ಎಂದು ಶುಭಾಷಯ ತಿಳಿಸಿದ್ದಾರೆ.

ಈ ವಿಚಾರವನ್ನು ಜ್ಯಾಕ್‌ ಮೆಕಾರ್ಥಿ ಅವರ ಮಗ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದು ನನ್ನ ಮನವಿಗೆ ಸ್ಪಂದಿಸಿ ವಿಮಾನದಲ್ಲಿ ನನ್ನ ತಂದೆಯ ಹುಟ್ಟಹಬ್ಬ ಆಚರಿಸಿದ್ದಕ್ಕಾಗಿ ಯುಎಸ್‌ ಏರ್‌ಲೈನ್ಸ್‌ಗೆ ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ಸಹಪ್ರಯಾಣಿಕರೆಲ್ಲರೂ ಅಜ್ಜನಿಗೆ ಶುಭಾಷಯ ತಿಳಿಸಿ, ಅವರ ಸಂತೋಷವನ್ನು ಇನ್ನಷ್ಟು ಇಮ್ಮಡಿಗೊಳಿಸಿದರು.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!