ಉಕ್ರೇನ್‌ ರಷ್ಯಾ ಯುದ್ದದ ಪರಿಣಾಮ: ಜಾಗತಿಕ ಆರ್ಥಿಕ ವಿಘಟನೆಯ ಕುರಿತು ಐಎಂಎಫ್‌ ಎಚ್ಚರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಉಕ್ರೇನ್‌ ರಷ್ಯಾ ಯುದ್ಧದ ಪರಿಣಾಮದಿಂದಾಗಿ ಜಾಗತಿಕ ಆರ್ಥಿಕ ವಿಘಟನೆಯು ಸಂಭವಿಸುತ್ತಿದ್ದು ಇದರ ವಿರುದ್ಧ ಅಂತರಾಷ್ಟ್ರೀಯ ಹಣಕಾಸು ನಿಧಿಯು ಎಚ್ಚರಿಸಿದೆ ಮತ್ತು ದಶಕಗಳ ಏಕೀಕರಣವನ್ನು ಮುರಿಯುವುದು ಜಗತ್ತಿಗೆ ಋಣಾತ್ಮಕವಾಗಿ ಪರಿಣಮಿಸಲಿದ್ದು ಜಗತ್ತನ್ನು ಬಡತನಕ್ಕೆ ದೂಡುತ್ತದೆ ಎಂದು ಹೇಳಿದೆ.

ಈ ಕುರಿತು ಐಎಂಎಫ್‌ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ಅವರು ಉಪ ವ್ಯವಸ್ಥಾಪಕ ನಿರ್ದೇಶಕಿ ಗೀತಾ ಗೋಪಿನಾಥ್ ಹಾಗೂ ಕಾರ್ಯತಂತ್ರ ನೀತಿ ಮತ್ತು ಪರಿಶೀಲನಾ ವಿಭಾಗದ ಮುಖ್ಯಸ್ಥೆ ಸೆಯ್ಲಾ ಪಜಾರ್ಬಸಿಯೊಗ್ಲು ಅವರೊಂದಿಗೆ ಲೇಖನವೊಂದನ್ನು ಹಂಚಿಕೊಂಡಿದ್ದು “30 ಕ್ಕೂ ಹೆಚ್ಚು ದೇಶಗಳು ಪ್ರಮುಖ ಸರಕುಗಳ ವ್ಯಾಪಾರವನ್ನು ನಿರ್ಬಂಧಿಸಿವೆ. ಈ ಕೊರತೆಯನ್ನು ನಿವಾರಿಸಲು ವ್ಯಾಪಾರದ ಅಡೆತಡೆಗಳನ್ನು ಕಡಿಮೆ ಮಾಡಬೇಕು ಎಂದು ಹೇಳಿದ್ದಾರೆ.

“ಪೂರೈಕೆ ಸರಪಳಿಗಳನ್ನು ಸುರಕ್ಷಿತಗೊಳಿಸಲು ಮತ್ತು ಇತರೆ ಅಡೆತಡೆಗಳಿಂದ ಉತ್ಪಾದನೆಯ ನಷ್ಟವನ್ನು ಕಡಿಮೆ ಮಾಡಲು ಎಲ್ಲಾ ದೇಶಗಳು ಆಮದುಗಳನ್ನು ವೈವಿಧ್ಯಗೊಳಿಸಬೇಕು. ಸಾಲ ಪುನರಚನೆ ಮತ್ತು ದುರ್ಬಲತೆಗಳನ್ನು ತಡೆಯಲು ಜಗತ್ತಿನ 20 ದೊಡ್ಡ ಆರ್ಥಿಕತೆಗಳ ಗುಂಪು ಸಹಾಯ ಮಾಡಬೇಕು” ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

“ಈ ವಿಘಟನೆಯು ಬೇರೆ ಬೇರೆ ದೇಶಗಳಲ್ಲಿ ಪರಿಣಾಮ ಬೀರಲಿದ್ದು ಪ್ರತಿ ಆದಾಯದ ಮಟ್ಟದಲ್ಲಿ ಜನರು ಹಾನಿಗೊಳಗಾಗುತ್ತಾರೆ. ಬದುಕಲು ಆಹಾರ ಆಮದುಗಳನ್ನು ಅವಲಂಬಿಸಿರುವ ಕಡಿಮೆ-ವೇತನದ ಕೆಲಸಗಾರರು ಹಾಗೂ ಹೆಚ್ಚು ಸಂಬಳ ಪಡೆಯುವ ವೃತ್ತಿಪರರು ಮತ್ತು ಮಧ್ಯಮ-ಆದಾಯದ ಕಾರ್ಖಾನೆಯ ಕೆಲಸಗಾರರು ಸೇರಿದಂತೆ ಎಲ್ಲರೂ ಉತ್ತಮ ಅವಕಾಶಗಳನ್ನು ಹುಡುಕಿಕೊಂಡು ಬೇರೆಡೆಗೆ ಹೋಗಲು ಪ್ರಾರಂಭಿಸುತ್ತಾರೆ ಇದು ದೇಶಗಳ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಲಿದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಎಲ್ಲ ದೇಶಗಳೂ ಪಾವತಿ ವ್ಯವಸ್ಥೆಯನ್ನು ಆಧುನೀಕರಿಸಬೇಕು, ವೆಚ್ಚವನ್ನು ಕಡಿಮೆ ಮಾಡಲು ಮತ್ತು ಸುರಕ್ಷತೆಯನ್ನು ಸುಧಾರಿಸುವ ದೃಷ್ಟಿಯಿಂದ ಹಣ ರವಾನೆಯನ್ನು ನಿರ್ವಹಿಸಲು ದೇಶಗಳು ಒಟ್ಟಾಗಿ ಕೆಲಸ ಮಾಡಿ ಸಾರ್ವಜನಿಕ ಡಿಜಿಟಲ್ ವೇದಿಕೆಯನ್ನು ರಚಿಸಬೇಕು, ಹವಾಮಾನ ಬದಲಾವಣೆಯನ್ನು ಎದುರಿಸಲು ರಾಷ್ಟ್ರಗಳು ಸಹಕರಿಸಬೇಕು ಎಂದು IMF ಅಧಿಕಾರಿಗಳು ಉಲ್ಲೇಖಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!