Wednesday, July 6, 2022

Latest Posts

ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ. ಯಶೋವರ್ಮ ನಿಧನ: ದತ್ತಾತ್ರೇಯ ಹೊಸಬಾಳೆ ಸಂತಾಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಶಿಕ್ಷಣ ತಜ್ಞ, ಪ್ರಾಧ್ಯಾಪಕ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾಗಿದ್ದ ಡಾ. ಯಶೋವರ್ಮ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆಗಾಗಿ ದಾಖಲಾಗಿದ್ದರು. ಅದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಅವರ‌ ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸಂತಾಪ ಸೂಚಿಸಿದ್ದಾರೆ.

“ಡಾ. ಯಶೋವರ್ಮ ಅವರ‌ ನಿಧನದ ದುಃಖದ ಸುದ್ದಿ ತಿಳಿದು ಅತೀವ ಆಘಾತವಾಯಿತು. ಇದು ಶಿಕ್ಷಣ, ಸೇವಾ ಕ್ಷೇತ್ರಗಳಿಗೆ ಬಹಳ ದೊಡ್ಡ ನಷ್ಟ. ಡಾ। ಯಶೋವರ್ಮರನ್ನೂ, ಅವರ ಕಾರ್ಯವನ್ನೂ ನಾಡು ದೀರ್ಘಕಾಲದವರೆಗೆ ಸ್ಮರಿಸುತ್ತದೆ. ದೇವರು ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನೂ, ದಿವಂಗತರ ಆತ್ಮಕ್ಕೆ ಸದ್ಗತಿಯನ್ನೂ ನೀಡಲೆಂದು ಪ್ರಾರ್ಥಿಸುತ್ತೇನೆ” ಎಂದು ಹೊಸಬಾಳೆವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss