ಅನೈತಿಕ ಸಂಬಂಧ ಶಂಕಿಸಿ ಜೋಡಿ ಕೊಲೆ: ಆರೋಪಿಗಳಿಗೆ ಗಲ್ಲು ಶಿಕ್ಷೆ ಪ್ರಕಟಿಸಿದ ಚಿಕ್ಕೋಡಿ ನ್ಯಾಯಾಲಯ

ಹೊಸ ದಿಗಂತ ವರದಿ, ಚಿಕ್ಕೋಡಿ:

ಅನೈತಿಕ ಸಂಬಂಧಕ್ಕೆ ಸಂಶಯದಡಿ ಯುವಕ-ವಿವಾಹಿತೆಯನ್ನು ಜಾಲಿ ಗಿಡಗೆ ಕಟ್ಟಿ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ಪ್ರಕರಣಕ್ಕೆ ಹಿನ್ನೆಲೆ ಮೂವರು ಆರೋಪಿಗಳಿಗೆ ಚಿಕ್ಕೋಡಿಯ ಏಳನೆ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಗಲ್ಲು ಶಿಕ್ಷೆ ಪ್ರಕಟಿಸಿ ಬುಧವಾರ ತೀರ್ಪು ಹೊರಡಿಸಿದೆ.

ಚಿಕ್ಕೋಡಿ ತಾಲೂಕಿನ ಮಮದಾಪೂರ ಕೆಕೆ ಗ್ರಾಮದಲ್ಲಿ 2013 ರಲ್ಲಿ ಸಂಗೀತಾ ಆಕಳೆ ಹಾಗು ಬಸವರಾಜ ಬುರ್ಜಿ ಇಬ್ಬರು ಅನೈತಿಕ ಸಂಭಂದ ಹಿನ್ನಲೆ ಇಬ್ಬರನ್ನೂ ಜಾಲಿ ಗಿಡಕ್ಕೆ ಕಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೋಲೆ ಮಾಡಿದ ಆರೋಪಿಗಳಾದ ಬಾಬು ಮುತ್ತೇಪ್ಪ ಆಕಳೆ, ನಾಗಪ್ಪ ಮುತ್ತೇಪ್ಪ ಆಕಳೆ, ಮುತ್ತೇಪ್ಪ ಭೀಮಪ್ಪ ಆಕಳೆ ಎಂಬ ಮೂವರು ದೋಷಿಗಳಿಗೆ ಏಳನೆ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಎಸ್.ಎಲ್.ಚೌವ್ಹಾಣ ತೀರ್ಪು ನೀಡಿ ಆದೇಶ ಹೊರಡಿಸಿದ್ದಾರೆ.

ಘಟನೆ ವಿವಿರ

ಕಳೆದ 22 ಅಕ್ಟೋಬರ್ 2013 ರಂದು ವಿವಾಹಿತೆಯಾಗಿದ್ದ ಸಂಗೀತಾ ಬಾಬು ಆಕಳೆ ಮತ್ತು ಬಸವರಾಜ ಪ್ರಭಾಕರ ಬುರ್ಜಿ ಎಂಬ ಯುವಕ ಅನೈತಿಕ ಸಂಬಂಧ ಹಿನ್ನಲೆಯಲ್ಲಿ ಜಾಲಿ ಗಿಡಕ್ಕೆ ಕಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಸಂಗೀತಾ ಮತ್ತು ಬಸವರಾಜ ಇಬ್ಬರು ಮೊಬೈಲ್ ನಲ್ಲಿ ಮಾತನಾಡಿದ್ದನ್ನು ವಿವಾಹಿತೆಯ ಗಂಡ ಮೊಬೈಲದಲ್ಲಿ ರೇಕಾರ್ಡ್ ಮಾಡಿ ಇಬ್ಬರನ್ನು ಎಳೆದು ತಂದು ಜಾಲಿ ಗಿಡಕ್ಕೆ ಕಟ್ಟಿ  ಅವಾಚ್ಯ ಶಬ್ದದಿಂದ ಬೈದು ಮರಕಾಸ್ರ್ತದಿಂದ ಇಬ್ಬರನ್ನು ಕೊಚ್ಚಿ ಕೊಲೆ ಮಾಡಿದ್ದರು.
ಪ್ರಕರಣದ ಕುರಿತು ಅಂದಿನ ಸಿಪಿಐ ಶಂಕರ ರಾಗಿ ನ್ಯಾಯಾಲಯಕ್ಕೆ ದೋಷಾರೋಪ ಸಲ್ಲಿಸಿದ್ದರು. ಕಳೆದ ಒಂಭತ್ತು ವರ್ಷ ವಿಚಾರಣೆ ನಡೆಸಿದ ನ್ಯಾಯಾಲಯ ಬುಧವಾರ ಮೂವರು ಆರೋಪಿತರಿಗೆ ಗಲ್ಲು ಶಿಕ್ಷೆ ನೀಡಿ ತೀರ್ಪು ನೀಡಿದೆ. ಸರ್ಕಾರಿ ಅಭಿಯೋಜಕ ವೈ.ಜಿ.ತುಂಗಳ ಪ್ರಕರಣದ ವಾದಮಂಡಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!