ಬ್ರಿಟೀಷರ ನಿದ್ದೆಗೆಡಿಸಿದ್ದ ಸ್ವಾತಂತ್ರ್ಯ ವೀರರು..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ (ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವ ವಿಶೇಷ)

ಕೇಶವ ಪ್ರಸಾದ್ (ಬಿಹಾರ)
ಸ್ವಾತಂತ್ರ್ಯ ಹೋರಾಟಗಾರ ಕೇಶವ ಪ್ರಸಾದ್ ಅವರು 1930-32ರಲ್ಲಿ ನಡೆದ ನಾಗರಿಕ ಅಸಹಕಾರ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಪ್ರಸಾದ್ ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕ್ ಅಸೋಸಿಯೇಶನ್‌ನ ಸದಸ್ಯರಾಗಿದ್ದರು. ಸ್ಫೋಟಕ ಮತ್ತು ಶಸ್ತ್ರಾಸ್ತ್ರ ವಶಪಡಿಸಿಕೊಂಡ ಘಟನೆಗೆ ಸಂಬಂಧಿಸಿದಂತೆ ಅವರನ್ನು ಗಯಾದಲ್ಲಿ ಬಂಧಿಸಲಾಯಿತು. ಆ ಬಳಿಕ ಅವರನ್ನು ಗಯಾ ಪಿತೂರಿ ಪ್ರಕರಣದಲ್ಲಿ ವಿಚಾರಣೆಗೆ ಒಳಪಡಿಸಲಾಯಿತು. 1933 ರಲ್ಲಿ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಅಂಡಮಾನ್‌ಗೆ ಗಡೀಪಾರು ಮಾಡಲಾಯಿತು. ಆ ಬಳಿಕ ಅವರು ಜುಲೈ 1937 ರಲ್ಲಿ 37 ದಿನಗಳ ಕಾಲ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿದರು. ಕೇಶವ ಪ್ರಸಾದ್ 1937 ರಲ್ಲಿ ಸ್ವದೇಶಕ್ಕೆ ಮರಳಿದರು ಮತ್ತು ಒಂದು ವರ್ಷದ ನಂತರ ಬಿಡುಗಡೆಯಾದರು. ಅವರನ್ನು ಮತ್ತೆ 1942 ರಲ್ಲಿ ಬಂಧಿಸಲಾಯಿತು. ಸ್ವಾತಂತ್ರ್ಯದ ಬಳಿಕ ಆಧ್ಯಾತ್ಮಿಕವಾಗಿ ಒಲವು ಬೆಳೆಸಿಕೊಂಡ ಅವರು ಬೃಂದಾವನದಲ್ಲಿ ನೆಲೆಸಿದರು.

ಎನ್.ಎಂ.ಗೋಕಲೆ (ಮಹಾರಾಷ್ಟ್ರ)
ಎನ್.ಎಂ.ಗೋಖಲೆ ಅಸಹಕಾರ ಚಳುವಳಿ ಮತ್ತು 1930 ರ ಮಾರ್ಚ್ 12 ರಂದು ಮಹಾತ್ಮ ಗಾಂಧಿಯವರ ದಂಡಿ ಮೆರವಣಿಗೆ ವೇಳೆ ಸಕ್ರಿಯ ಪಾತ್ರವಹಿಸಿ ರಾಷ್ಟ್ರೀಯ ನಾಯಕರ ಗಮನಸೆಳೆದರು.
ಉಪ್ಪಿನ ಮೇಲಿನ ಕರ ವಿರೋಧಿಸಿ ಬಾಂಬೆ ಪ್ರೆಸಿಡೆನ್ಸಿಯ ಒಂದು ಭಾಗವಾದ ಶಿರೋಡಾ ಉಪ್ಪಿನಂಗಡಿಗಳ ಮೇಲೆ ನಡೆದ ಸರಣಿ ದಾಳಿಯ ಹಿಂದೆ ಮಹಾರಾಷ್ಟ್ರ ಸತ್ಯಾಗ್ರಹ ಮಂಡಲದ ಪದಾಧಿಕಾರಿಯಾಗಿದ್ದ ಎನ್ ಎಂ ಗೋಖಲೆ ಅವರ ಪಾತ್ರವಿತ್ತು. ಬಾಂಬೆ ಪ್ರೆಸಿಡೆನ್ಸಿಯ ಬಹುತೇಕ ಎಲ್ಲಾ ಜಿಲ್ಲೆಗಳಿಂದ ಮಹಾರಾಷ್ಟ್ರ ಸತ್ಯಾಗ್ರಹ ಮಂಡಲದ ಸ್ವಯಂಸೇವಕರು ಗೋಖಲೆ ನೇತೃತ್ವದಲ್ಲಿ ರತ್ನಗಿರಿಯ ಕರಾವಳಿ ಗ್ರಾಮವಾದ ಶಿರೋಡಾಕ್ಕೆ ಆಗಮಿಸಿದರು. ಮೇ 12 ರಿಂದ ಮೇ 15 ರವರೆಗೆ ಪ್ರತಿದಿನ ಗುಂಪುಗೂಡಿ ಆಗಮಿಸಿದ ಜನಸಮೂಹ ಶಿರೋಡಾ ದಲ್ಲಿ ಸಂಗ್ರಹಿಸಿಡಲಾಗಿದ್ದ ಅಪಾರ ಪ್ರಮಾಣದ ಉಪ್ಪಿನ ಸಂಗ್ರಹದ ಮೇಲೆ ದಾಳಿ ನಡೆಸಿತು. ಗೋಖಲೆ ಅವರು ಈ ದಾಳಿಗಳನ್ನು ಅಹಿಂಸಾತ್ಮಕವಾಗಿ ನಡೆಸಬೇಕೆಂದು ಉದ್ದೇಶಿಸಿದ್ದರು. 1930 ರ ಮೇ 12 ರ ಬೆಳಿಗ್ಗೆ ದಾಳಿಗಳು ಪ್ರಾರಂಭವಾಯಿತು. ಮಹಾರಾಷ್ಟ್ರ ಸತ್ಯಾಗ್ರಹಿ ಮಂಡಲವು ಸುಮಾರು 1000 ಕೆಜಿ ಉಪ್ಪನ್ನು ತನ್ನ ವಶಕ್ಕೆ ಪಡೆದುಕೊಂಡು ಮಾರಾಟ ಮಾಡಿತು. ಆ ವೇಳೆ ಕೇವಲ ನಾಲ್ಕೇ ದಿನಗಳಲ್ಲಿ ಒಟ್ಟು 341 ಸತ್ಯಾಗ್ರಹಿಗಳನ್ನು ಬಂಧಿಸಲಾಯಿತು. ಆ ವೇಳೆ ಸತ್ಯಾಗ್ರಹಿಗಳ ಮೇಲೆ ಸರ್ಕಾರವು ಲಾಠಿ ಚಾರ್ಜ್ ಮಾಡಲು ಪ್ರಾರಂಭಿಸಿದ್ದರಿಂದ 4 ದಿನಗಳ ಬಳಿಕ ಚಳವಳಿಯನ್ನು ಸ್ಥಗಿತಗೊಳಿಸಲು ತೀರ್ಮಾನಿಸಲಾಯಿತು. ಉಪ್ಪಿನ ಸತ್ಯಾಗ್ರಹ ಯಶಸಸ್ವಿಯಾಗುವಲ್ಲಿ ಗೋಖಲೆ ಪಾತ್ರ ಬಹುಮುಖ್ಯದ್ದಾಗಿತ್ತು.

ಇತ್ತರ್‌ ಸಿಂಗ್‌ (ಪಂಜಾಬ್)
ಪಂಜಾಬ್‌ನಿಂದ ಮೂಲದ ಇತ್ತರ್ ಸಿಂಗ್ ಅವರು ಭಾರತೀಯ ಮಿಲಿಟರಿ ಪಡೆಯಲ್ಲಿ ಸಿಪಾಯಿಯಾಗಿ ಆಗಿ ಸೇವೆ ಸಲ್ಲಿಸಿದ್ದರು ಮತ್ತು ನಂತರ ಪೋರ್ಟ್ ಬ್ಲೇರ್‌ನಲ್ಲಿ ಜಮೇದಾರ್ ಆಗಿ ಸೇವೆ ಸಲ್ಲಿಸಿದ್ದರು.
1942 ರಲ್ಲಿ ದ್ವೀಪದ ಮೇಲೆ ಜಪಾನಿನ ಆಕ್ರಮಣದ ಸಮಯದಲ್ಲಿ, ಇತ್ತರ್ ಸಿಂಗ್ ಪೋರ್ಟ್ ಬ್ಲೇರ್‌ನಲ್ಲಿ ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ (IIL) ಸದಸ್ಯರಾದರು. ಆ ಬಳಿಕ ಹೋರಾಟಗಾರರಿಗೆ ತರಬೇತಿ ನೀಡಲು ಪ್ರಾರಂಭಿಸಿದರು.
ಮಾರ್ಚ್ 30, 1943 ರಂದು, ಇತರ ಆರು ಜನರೊಂದಿಗೆ ಇತ್ತರ್ ಸಿಂಗ್ ಅವರನ್ನು ಬಂಧಿಸಲಾಯಿತು, ಆ ಬಳಿಕ ಅಮಾನವೀಯ ಚಿತ್ರಹಿಂಸೆ ನೀಡಿ ಸೆಲ್ಯುಲಾರ್ ಜೈಲಿನಿಂದ ಹೊರಗೆ ಕರೆದೊಯ್ಯಲಾಯಿತು. ದುಗೊನಾಬಾದ್‌ನ ಸಮುದ್ರ ತೀರದ ಬಳಿ ಜಪಾನಿನ ಗುಂಡಿನ ದಳದ ಇತ್ತರ್‌ ಮೇಲೆ ಗುಂಡುಹಾರಿಸಿ ಕೊಂದುಹಾಕಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!