September 26, 2026
Saturday, September 26, 2026
spot_img

NEET ಮರುಪರೀಕ್ಷೆಗೆ ಅಭೇದ್ಯ ಭದ್ರತೆ: ಅರೆಸೇನಾ ಪಡೆ ಕಾವಲಿನಲ್ಲಿ ಪ್ರಶ್ನೆಪತ್ರಿಕೆ ಸಾಗಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಬೆನ್ನಲ್ಲೇ, ದೇಶಾದ್ಯಂತ ತೀವ್ರ ಕುತೂಹಲ ಮೂಡಿಸಿರುವ ನೀಟ್‌-ಯುಜಿ (NEET-UG) ಮರುಪರೀಕ್ಷೆಯು ಜೂನ್ 21ರ ಭಾನುವಾರ ನಡೆಯಲಿದೆ. ದೇಶದ ಒಟ್ಟು 551 ನಗರಗಳ 5,500ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಪರೀಕ್ಷೆ ಆಯೋಜಿಸಲಾಗಿದ್ದು, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಯಾವುದೇ ಲೋಪದೋಷಗಳಿಲ್ಲದೆ ಪರೀಕ್ಷೆ ನಡೆಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಇಂದು ದೇಶಾದ್ಯಂತ ಮೆಗಾ ಮಾಕ್ ಡ್ರಿಲ್

ಪರೀಕ್ಷಾ ಪ್ರಕ್ರಿಯೆಯನ್ನು ಸುಗಮಗೊಳಿಸಲು ಎನ್‌ಟಿಎ ಇಂದು (ಶನಿವಾರ) ಬೆಳಗ್ಗೆ 9 ರಿಂದ ರಾತ್ರಿ 8 ಗಂಟೆಯವರೆಗೆ ದೇಶವ್ಯಾಪಿ ಮೆಗಾ ಮಾಕ್ ಡ್ರಿಲ್ ಹಮ್ಮಿಕೊಂಡಿದೆ. ಪ್ರಶ್ನೆಪತ್ರಿಕೆ ವಿತರಣೆ, ಒಎಂಆರ್ ಶೀಟ್ ಸಂಗ್ರಹಣೆ ಹಾಗೂ ಸಾಗಣೆಯ ಪ್ರತಿಯೊಂದು ಹಂತದ ತಾಲೀಮು ಇದರಲ್ಲಿದೆ.

2.5 ಲಕ್ಷ ಪೊಲೀಸರ ಅಭೇದ್ಯ ಕೋಟೆ!

ಪರೀಕ್ಷಾ ಅಕ್ರಮಗಳಿಗೆ ಬ್ರೇಕ್ ಹಾಕಲು ಹಿಂದೆಂದೂ ಕಾಣದ 3 ಹಂತದ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಜಿಲ್ಲಾಡಳಿತ, ರಾಜ್ಯ ಪೊಲೀಸ್ ಮತ್ತು ಕೇಂದ್ರದ ವಿಶೇಷ ಭದ್ರತಾ ಪಡೆಗಳು ಜಂಟಿಯಾಗಿ ಕಾರ್ಯನಿರ್ವಹಿಸಲಿವೆ. ಕಾನೂನು ಸುವ್ಯವಸ್ಥೆಗಾಗಿ 2.5 ಲಕ್ಷ ಪೊಲೀಸ್ ಸಿಬ್ಬಂದಿ ಹಾಗೂ ಪ್ರಶ್ನೆಪತ್ರಿಕೆಗಳ ಸುರಕ್ಷಿತ ಸಾಗಣೆಗಾಗಿ 15,000 ಅರೆಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

Must Read