ಹುಬ್ಬಳ್ಳಿ-ಅಂಕೋಲ ರೈಲ್ವೆ ಅಭಿವೃದ್ಧಿ ಯೋಜನೆ ಜಾರಿ ಅಗತ್ಯವಾಗಿದೆ: ಸಚಿವ ಪ್ರಹ್ಲಾದ ಜೋಶಿ

ಹೊಸದಿಗಂತ ವರದಿ, ಹುಬ್ಬಳ್ಳಿ:
ಜಾಗತಿಕ ಮಟ್ಟದಲ್ಲಿ ದೇಶದ ಉತ್ಪನಗಳಿಗೆ ಮಾರುಕಟ್ಟೆ ವ್ಯವಸ್ಥೆ ಲಭ್ಯವಾಗಲು ಸಾರಿಗೆ ವ್ಯವಸ್ಥೆ ಸೂಕ್ತವಾಗಿರುವುದು ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿ-ಅಂಕೋಲ ರೈಲ್ವೆ ಅಭಿವೃದ್ಧಿ ಯೋಜನೆ ಜಾರಿಗೆ ಬರುವುದು ಅವಶ್ಯವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಗುರುವಾರ ನಗರದ ಪ್ರವಾಸ ಮಂದಿರದಲ್ಲಿ ಹುಬ್ಬಳ್ಳಿ-ಅಂಕೋಲಾ ಅಭಿವೃದ್ಧಿ ಯೋಜನೆಯ ಕುರಿತು ಅಧ್ಯಯನಕ್ಕೆ ಬಂದ ತಂಡದೊಂದಿಗೆ ಚರ್ಚಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಗತ್ತಿನಲ್ಲಿ ಉತ್ಪನ್ನಗಳ ಸರಬರಾಜು ವೆಚ್ಚ ಕೇವಲ ಶೇ. 2-3 ರಷ್ಟಿದ್ದು, ಆದರೆ ಭಾರತದಲ್ಲಿ ಸರಬರಾಜು ವೆಚ್ಚ ಶೇ. 13-14 ರಷ್ಟಿದೆ. ದೇಶವು 2025ಕ್ಕೆ 5 ಟ್ರಿಲಿಯನ್ ಹಾಗೂ 2047ಕ್ಕೆ 32 ಟ್ರಿಲಿಯನ್ ಆರ್ಥಿಕತೆಯ ಗುರಿಯನ್ನು ಸಾಧಿಸುವ ಟಾರ್ಗೆಟ್‌ ಇರಿಸಿಕೊಂಡಿದ್ದೇವೆ. ಈ ಉದ್ದೇಶದಿಂದ ಸರಬರಾಜು ವೆಚ್ಚ ಹಾಗೂ ಮೂಲ ಸೌಕರ್ಯ ಕ್ಷೇತ್ರಗಳು ಅಭಿವೃದ್ಧಿಯಾಗುವ ಅಗತ್ಯವಿದೆ ಎಂದರು.
ಹುಬ್ಬಳ್ಳಿ ಅಂಕೋಲಾ ರೈಲ್ವೆ ಯೋಜನೆ 5 ಸಾವಿರದ ಐದು ನೂರು ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ಹಾದುಹೋಗುತ್ತದೆ.  ಅರಣ್ಯ ಪ್ರದೇಶಕ್ಕೆ, ಪ್ರಾಣಿ-ಪಕ್ಷಿಗಳಿಗೆ ಹಾಗೂ ಜಲಚರಗಳಿಗೆ ತೊಂದರೆಯಾಗದಂತೆ ಕಾಲಜಿ ವಹಿಸಲಾಗುತ್ತದೆ. ಜಗತ್ತಿನಲ್ಲೇ 2 ನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ದೇಶ ಭಾರತ. ಹೀಗಾಗಿ ಉದ್ಯೋಗ ಹಾಗೂ ಕೈಗಾರಿಕೆಯನ್ನು ಸೃಷ್ಟಿಸಬೇಕಾಗಿದೆ. ಈ ಎಲ್ಲ ಸಂಗತಿಗಳ ಮುಂದಾಲೋಚಿಸಿ ಅಭಿವೃದ್ಧಿ ಕಾರ್ಯ ಮಾಡಬೇಕು. ಕೇಂದ್ರ ಸರ್ಕಾರ ಈ ಅಧ್ಯಯನ ತಂಡದ ವರದಿ ಆಧರಿಸಿ ಸೂಕ್ಷ್ಮವಾಗಿ ನಿರ್ವಹಿಸಲಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!