ಬ್ಯಾನ್‌ ಬೆನ್ನಲ್ಲೇ ಪಿಎಫ್‌ಐಗೆ ಮತ್ತೊಂದು ಶಾಕ್..‌ 5.20 ಕೋಟಿ ರೂ. ದಂಡ ಕಟ್ಟಲು ಸೂಚಿಸಿದ ಕೋರ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಯೋಜಿಸಿದ ಆರೋಪದ ಮೇಲೆ ಬ್ಯಾನ್‌ ಆದ ಬೆನ್ನಲ್ಲೇ ಪಿಎಫ್‌ ಐಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಎನ್‍ಐಎ ದಾಳಿಗೆ ಆಕ್ರೋಶ ವ್ಯಕ್ತಪಡಿಸಿ ನಡೆಸಿದ ಪ್ರತಿಭಟನೆ ವೇಳೆ ಆದ  ಹಾನಿಗೆ 5.20 ಕೋಟಿ ರೂ. ನಷ್ಟ ಭರಿಸಿಕೊಡುವಂತೆ ಸಂಘಟನೆಯ ಕೇರಳ ಪ್ರಧಾನ ಕಾರ್ಯದರ್ಶಿಗೆ ಕೇರಳ ಹೈಕೋರ್ಟ್ ಸೂಚನೆ ನೀಡಿದೆ.
ಎನ್‍ಐಎ ದಾಳಿ ಖಂಡಿಸಿ ಪಿಎಫ್‍ಐ ಕಾರ್ಯಕರ್ತರು ಸೆ.23 ರಂದು ನಡೆಸಿದ ಪ್ರತಿಭಟನೆ ವಿರುದ್ಧ ಹೈಕೋರ್ಟ್ ಸ್ವಯಂ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಕೆ.ಜಯಶಂಕರನ್ ನಂಬಿಯಾರ್ ಮತ್ತು ಮೊಹಮ್ಮದ್ ನಿಯಾಸ್ ಸಿ.ಪಿ ಅವರನ್ನೊಳಗೊಂಡ ವಿಭಾಗೀಯ ಪೀಠವು, ಕೇರಳದಲ್ಲಿ ನಾಗರೀಕರು ಹಾಗೂ ಸಾರ್ವಜನಿಕರ ಆಸ್ತಿ ಪಾಸ್ತಿಗೆ ಉಂಟಾದ ಹಾನಿಗಳಿಗೆ ಪಿಎಫ್‌ಐ ಮತ್ತು ಅದರ ಪ್ರಧಾನ ಕಾರ್ಯದರ್ಶಿಯೇ ʼನೇರ ಹೊಣೆʼ ಎಂದು ಕಿಡಿಕಾರಿದ್ದಲ್ಲದೆ, 2 ವಾರಗಳೊಳಗೆ ಸಂಪೂರ್ಣ ನಷ್ಟ ಭರಿಸುವಂತೆ ಸೂಚಿಸಿದೆ.
ನಾಗರಿಕರ ಜೀವನವನ್ನು ಅಪಾಯಕ್ಕೆ ಸಿಲುಕಿಸುವವರಿಗೆ ನಾವು ನೀಡುತ್ತಿರುವ ಸಂದೇಶವು ಸ್ಪಷ್ಟವಾಗಿದೆ ಎಂದ ನ್ಯಾಯಪೀಠವು, ಹರತಾಳದ ನಂತರ ರಾಜ್ಯದಲ್ಲಿ ದಾಖಲಾಗಿರುವ ಎಲ್ಲಾ ಪ್ರಕರಣಗಳಲ್ಲಿ ಪಿಎಫ್‌ಐ ಪ್ರಧಾನ ಕಾರ್ಯದರ್ಶಿಯನ್ನು ಹೆಚ್ಚುವರಿ ಆರೋಪಿಯನ್ನಾಗಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!