ಹಸುವಿನ ತುಪ್ಪವನ್ನು ಮೂಗಿಗೆ ಹಾಕಿಕೊಳ್ಳುವುದರಿಂದ ಇಷ್ಟೆಲ್ಲಾ ಪ್ರಯೋಜನಗಳಿದ್ಯಾ…?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಹಸುವಿನ ತುಪ್ಪವನ್ನು ಮೂಗಿನ ಹೊಳ್ಳೆಗಳಿಗೆ ಹಾಕಿಕೊಳ್ಳುವುದರಿಂದ ಇರುವ ಪ್ರಯೋಜನಗಳ ಬಗ್ಗೆ ತಿಳಿದರೆ ನೀವು ಖಂಡಿತ ನಿಬ್ಬೆರಗಾಗುತ್ತೀರಿ. ಪ್ರತಿದಿನ ಬೆಳಿಗ್ಗೆ ಎರಡುಹನಿ ಹಸುವಿನ ತುಪ್ಪವನ್ನು ಮೂಗಿನ ಹೊಳ್ಳೆಗಳ ಮೂಲಕ ಸೇದುವುದರಿಂದ ಅದೆಷ್ಟೋ ಖಾಯಿಲೆಗಳು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ. ಇದು ನಿಮ್ಮ ರೋಗನಿರೋಧಕ ಶಕ್ತಿ, ನಿದ್ರಾಹೀನತೆ ಮತ್ತು ಮಾನಸಿಕ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.

ಭಾರತೀಯ ಪುರಾತನ ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಈ ವಿಧಾನಕ್ಕೆ ನಾಸ್ಯ ಎನ್ನುತ್ತಾರೆ. ನಾಸ್ಯವು ಪಂಚಕರ್ಮ ಚಿಕಿತ್ಸೆಯ ಐದು ವಿಧಾನಗಳಲ್ಲೊಂದು. ಇದನ್ನು ‘ನಸ ಹಿ ಶಿರ್ಸೋ ದ್ವಾರಂ’ ಎಂದು ಬಣ್ಣಿಸಲಾಗಿದೆ. ಅಂದರೆ ಮೂಗು ಮೆದುಳಿನ ಹೆಬ್ಬಾಗಿಲು. ಇದು ತಲೆ, ಬಾಯಿ, ಹಲ್ಲು, ಕಿವಿಗಳಿಗೆ ಸಂಬಂಧಿಸಿದ ಎಲ್ಲಾ ಅಸ್ವಸ್ಥತೆಗಳಿಗೆ ಸಹಾಯ ಮಾಡುತ್ತದೆ. ಇದು ಭುಜದ ಮೇಲಿನ ಎಲ್ಲಾ ಸಮಸ್ಯೆಗಳನ್ನು ದೂರ ಮಾಡುತ್ತದೆ.

ಬೆಳಿಗ್ಗೆ ಅಥವಾ ರಾತ್ರಿ ಮೂಗಿನ ಹೊಳ್ಳೆಗಳಲ್ಲಿ ಎರಡು ಹನಿ ಹಸುವಿನ ತುಪ್ಪವನ್ನು ಹಾಕುವುದು ನಿಮಗೆ ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ, ತಲೆನೋವು ಒತ್ತಡ, ಮೈಗ್ರೇನ್ ಗಳನ್ನು ನಿವಾರಿಸುತ್ತದೆ. ನಿಮ್ಮ ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ, ಅಲರ್ಜಿಯನ್ನು ಕಡಿಮೆ ಮಾಡುತ್ತದೆ, ಸ್ಮರಣಶಕ್ತಿ ಸುಧಾರಿಸುತ್ತದೆ,ಕೂದಲು ಉದುರುವಿಕೆ ಮತ್ತು ಬಿಳಿ ಕೂದಲಿಗೆ ಸಹಾಯ ಮಾಡುತ್ತದೆ, ಉದ್ವೇಗವನ್ನು ನಿವಾರಿಸುತ್ತದೆ, ನಿಮ್ಮ ಏಕಾಗ್ರತೆಯನ್ನು ಸುಧಾರಿಸುತ್ತದೆ ಮತ್ತು ಒಟ್ಟಾರೆ ಆರೋಗ್ಯಕ್ಕೆ ಸಹಾಯ ಮಾಡುತ್ತದೆ ಏಕೆಂದರೆ ಇದು ಎಲ್ಲಾ ನರಗಳ ಕಾರ್ಯಗಳನ್ನು ನೋಡಿಕೊಳ್ಳುವ ಮೆದುಳಿಗೆ ಸರಾಗವಾಗಿ ಕಾರ್ಯನಿರ್ವಹಿಸಲು ಸಹಾಯಕಾರಿಯಾಗಿದೆ.

ತಜ್ಞರು ಹೇಳುವ ಪ್ರಕಾರ ಥೈರಾಯ್ಡ್, ರುಮಟಾಯ್ಡ್ ಸಂಧಿವಾತ, ಮಲ್ಟಿಪಲ್ ಸ್ಕ್ಲೆರೋಸಿಸ್ ಇತ್ಯಾದಿ ಖಾಯಿಲೆಗಳಿಂದ ಬಳಲುತ್ತಿದ್ದ ರೋಗಿಗಳುನಿಯಮಿತ ನಾಸ್ಯ ಮಾಡುವುದರಿಂದ ಅದ್ಭುತ ಪ್ರಯೋಜನಗಳನ್ನು ಪಡೆದಿದ್ದಾರೆ. ಯಾರಾದರೂ ಪದೇ ಪದೇ ಒತ್ತಡಕ್ಕೊಳಗಾಗುತ್ತಿದ್ದರೆ, ಪದೇ ಪದೇ ತಲೆನೋವಿನಿಂದ ಬಳಲುತ್ತಿದ್ದರೆ, ದೇಹವು ಅತಿಯಾದ ಉಷ್ಣತೆಯನ್ನು ಹೊಂದಿದ್ದರೆ, ಮನಸ್ಸಿನಿಂದ ಕೆಲಸಗಳನ್ನು ಮಾಡಲು ಹೆಣಗಾಡುತ್ತಿದ್ದರೆ, ಕೂದಲಿನ ಸಮಸ್ಯೆಗಳು, ಮಂದ ದೃಷ್ಟಿ, ಮಂದ ಶ್ರವಣ, ನಿದ್ರಾಹೀನತೆಗಳಿಂದ ಬಳಲುತ್ತಿದ್ದರೆ ಅವರು ದ್ರವ ರೂಪದ ಹಸುವಿನ ತುಪ್ಪವನ್ನು ಹತ್ತಿ, ಡ್ರಾಪರ್‌ ಗಳ ಸಹಾಯದಿಂದ ಮೂಗಿಗೆ ತುಪ್ಪವನ್ನು ಹಾಕಿಕೊಳ್ಳುವುದರಿಂದ ತಮ್ಮ ಸಮಸ್ಯೆಗಳಿಂದ ದೂರವಾಗಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!