ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ಪಾಠ ಕಲಿಯುವುದಕ್ಕಿಂತ ಪಠ್ಯ ಪುಸ್ತಕಗಳನ್ನು ಹೊರುವುದೇ ಕಷ್ಟದ ಕೆಲಸವಾಗಿದೆ. ಈ ಬಗ್ಗೆ ಮಹತ್ವದ ನಿರ್ಧಾರಕ್ಕೆ ಸಚಿವ ಮಧು ಬಂಗಾರಪ್ಪ ಮುಂದಾಗಿದ್ದಾರೆ.
ಈಗಿರುವ ಬ್ಯಾಗ್ ತೂಕವನ್ನು ಮೂರನೇ ಒಂದರಷ್ಟು ಕಡಿಮೆ ಮಾಡಲು ಚಿಂತಿಸುತ್ತಿದ್ದೇವೆ, 2024-25 ನೇ ಶೈಕ್ಷಣಿಕ ವರ್ಷದಿಂದಲೇ ಈ ತೂಕ ಕಡಿಮೆ ಆಗಲಿದೆ.
ಮಕ್ಕಳಿಗೆ ಶಾಲಾ ಬ್ಯಾಗ್ ಹೊರುವುದೇ ದೊಡ್ಡ ಕಷ್ಟವಾಗಿದೆ. ಈಗಿರುವ ತೂಕವನ್ನು ಕಡಿಮೆ ಮಾಡುತ್ತೇವೆ. ಬ್ಯಾಗ್ ಹೊರೆ ಇಳಿಸುವುದರಿಂದ ಗುಣಮಟ್ಟಕ್ಕೆ ತೊಂದರೆಯಾಗುವುದಿಲ್ಲ ಎಂದಿದ್ದಾರೆ.