ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಕಾವೇರಿ ಕಿಚ್ಚು ಭುಗಿಲೆದ್ದಿದ್ದು, ತಮಿಳುನಾಡಿಗೆ ಕಾವೇರಿ ನೀಡು ಹರಿಸುವುದನ್ನು ಇಡೀ ರಾಜ್ಯವೇ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದೆ.
ಈ ಬಗ್ಗೆ ಚಿತ್ರ ನಾಯಕರು ಮಾತನಾಡುತ್ತಿಲ್ಲ, ಯಾಕೆ ಮೌನ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಬಗ್ಗೆ ನಟ ದರ್ಶನ್ ಖಾರವಾಗಿ ರಿಯಾಕ್ಟ್ ಮಾಡಿದ್ದಾರೆ.
ಪ್ರತೀ ಬಾರಿ ಕಾವೇರಿ ಹೋರಾಟದ ವಿಷಯ ಮುನ್ನೆಲೆಗೆ ಬಂದಾಗಲೆಲ್ಲ ದರ್ಶನ್ ಎಲ್ಲಿ, ಸುದೀಪ್ ಎಲ್ಲಿ, ಶಿವಣ್ಣ ಎಲ್ಲಿ ಅಂತೀರಿ, ಇನ್ಯಾವ ಹೀರೋಗಳೂ ಕಾಣೋದಿಲ್ವಾ? ಮೊದಲು ಕನ್ನಡ ಸಿನಿಮಾಗಳನ್ನು ನೋಡಿ ಆಮೇಲೆ ನಮ್ಮನ್ನ ಹೋರಾಟಕ್ಕೆ ಕರೀರಿ, ಬೇರೆ ಸಿನಿಮಾಗಳ ಮೇಲೆ ಇರೋ ಪ್ರೀತಿ ನಮ್ಮ ಭಾಷೆಯ ಸಿನಿಮಾಗಳ ಮೇಲೆ ಇಲ್ಲ.
ಇತ್ತೀಚೆಗಷ್ಟೇ ತಮಿಳು ಸಿನಿಮಾವೊಂದನ್ನು ವಿತರಕರೊಬ್ಬರು ೬ ಕೋಟಿಗೆ ಖರೀದಿ ಮಾಡಿದ್ರು, ಅದರಿಂದ ೩೭ ಕೋಟಿ ರೂಪಾಯಿ ಲಾಭ ಪಡೆದ್ರು ಇಂಥವರನ್ನು ಯಾಕೆ ಕರೆಯೋದಿಲ್ಲ? ಬರೀ ಶಿವಣ್ಣ, ದರ್ಶನ್, ಸುದೀಪ್, ಯಶ್ ಮಾತ್ರ ಯಾಕೆ ಬರಬೇಕು? ಎಂದು ಮಾತನಾಡಿದ್ದಾರೆ.