August 30, 2026
Sunday, August 30, 2026
spot_img

SIR ಬಗ್ಗೆ ಪ್ರಮುಖ ಮಾಹಿತಿ, ಅರ್ಜಿ ಸಲ್ಲಿಸೋಕೆ ಇನ್ನು ಐದು ದಿನವಷ್ಟೇ ಕಾಲಾವಕಾಶ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಭರದಿಂದ ಸಾಗುತ್ತಿದ್ದು, ಎನ್ಯೂಮರೇಷನ್‌ ಫಾರ್ಮ್‌ ಸಲ್ಲಿಕೆಗೆ ಇನ್ನೈದು ದಿನ ಮಾತ್ರ ಅವಕಾಶ ಇದೆ.

ಇದೇ ಆಗಸ್ಟ್‌ ಎಂಟರಂದು ಕೊನೆಯ ದಿನಾಂಕವಾಗಿದ್ದು, ಇದರ ನಂತರ ಸಲ್ಲಿಸಿದ ಫಾರ್ಮ್‌ಗಳನ್ನು ಪರಿಗಣಿಸಲು ಆಗುವುದಿಲ್ಲ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ. ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಓ) ಮನೆ ಮನೆಗೆ ಭೇಟಿ ನೀಡಿ ಫಾರ್ಮ್‌ಗಳನ್ನು ವಿತರಿಸುತ್ತಿದ್ದಾರೆ ಮತ್ತು ಸಂಗ್ರಹಿಸುತ್ತಿದ್ದಾರೆ. ಆಗಸ್ಟ್ 8ರ ಒಳಗಾಗಿ ಫಾರ್ಮ್ ಭರ್ತಿ ಮಾಡಿ ಬಿಎಲ್‌ಓಗಳಿಗೆ ಹಿಂತಿರುಗಿಸುವಂತೆ ಆಯೋಗ ಮನವಿ ಮಾಡಿದೆ.

ಎನ್ಯೂಮರೇಷನ್‌ ಫಾರ್ಮ್‌ ಸಲ್ಲಿಕೆ ಮಾಡದಿದ್ದರೆ ಆ ವ್ಯಕ್ತಿಯ ಹೆಸರು ಮೊದಲ ಕರಡು ಮತದಾರರ ಪಟ್ಟಿಯಲ್ಲಿ ಸೇರುವುದಿಲ್ಲ. ಹೀಗಾಗಿ ಮತದಾರರು ತಮ್ಮ ಫಾರ್ಮ್‌ನ್ನು ತಪ್ಪದೇ ಭರ್ತಿ ಮಾಡಿ ನೀಡಬೇಕಿದೆ. ಕೆಲವೆಡೆ ಫಾರ್ಮ್ ಭರ್ತಿ ಮಾಡಿ ಬಿಎಲ್‌ಓಗಳಿಗೆ ವಾಪಸ್ ಕೊಡುವಲ್ಲಿ ವಿಳಂಬವಾಗುತ್ತಿದೆ. ಇದರಿಂದಾಗಿ ಅನೇಕರ ಹೆಸರುಗಳು ಕರಡು ಪಟ್ಟಿಯಿಂದ ಕೈಬಿಡುವ ಸಾಧ್ಯತೆಯಿದೆ. ಆದ್ದರಿಂದ ರಾಜ್ಯ ಚುನಾವಣಾ ಆಯೋಗವು ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.

ರಾಜ್ಯ ಚುನಾವಣಾ ಆಯೋಗ ಎಲ್ಲಾ ಮತದಾರರಿಗೆ ಮನವಿ ಮಾಡಿದೆ. ಆಗಸ್ಟ್ 8ರ ಒಳಗಾಗಿ ಎನ್ಯೂಮರೇಷನ್ ಫಾರ್ಮ್ ಭರ್ತಿ ಮಾಡಿ ಬಿಎಲ್‌ಓಗೆ ಕೊಡಿ. ಇಲ್ಲದಿದ್ದರೆ ನಿಮ್ಮ ಹೆಸರು ಮೊದಲ ಕರಡು ಪಟ್ಟಿಯಲ್ಲಿ ಇರುವುದಿಲ್ಲ ಎಂದು ಆಯೋಗ ತಿಳಿಸಿದೆ. ಮತದಾರರ ಪಟ್ಟಿ ನವೀಕರಣವು ಚುನಾವಣಾ ಪ್ರಕ್ರಿಯೆಯ ಮುಖ್ಯ ಭಾಗವಾಗಿದೆ. ಸರಿಯಾದ ಪಟ್ಟಿ ಇದ್ದರೆ ಮಾತ್ರ ನ್ಯಾಯಯುತ ಚುನಾವಣೆ ನಡೆಯುತ್ತದೆ. ಆದ್ದರಿಂದ ಪ್ರತಿಯೊಬ್ಬ ಮತದಾರರೂ ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಹೇಳಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !