Wednesday, March 29, 2023

Latest Posts

ಅಸಹಜ ಲೈಂಗಿಕ ಕ್ರಿಯೆ-ವರದಕ್ಷಿಣೆ ಕಿರುಕುಳ ಆರೋಪ: ರಾಖಿ ಪತಿ ಆದಿಲ್​ಗೆ ನ್ಯಾಯಾಂಗ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್​ ನಟಿ ರಾಖಿ ಸಾವಂತ್​ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎಬ್ಬಿದೆ. ಮೈಸೂರು ಮೂಲದ ಪತಿ ಆದಿಲ್​ ದುರಾನಿ ವಿರುದ್ಧ ಅಸಹಜ ಲೈಂಗಿಕ ಕ್ರಿಯೆ ಮತ್ತು ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದು, ಆತನನ್ನು ಬಂಧಿಸಿರುವ ಮುಂಬೈ ಪೊಲೀಸರು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ. ಆದಿಲ್​ ದುರಾನಿಗೆ ಅಂಧೇರಿ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ನನ್ನ ಜೊತೆ ಬಲವಂತವಾಗಿ ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಅಲ್ಲದೆ, ವರದಕ್ಷಿಣೆ ವಿಚಾರವಾಗಿ ಹಲ್ಲೆ ಮಾಡಿದ್ದು, ನನಗೆ ತಿಳಿಸದೇ ನನ್ನ ಫ್ಲ್ಯಾಟ್​ನಲ್ಲಿದ್ದ ಹಣ ಮತ್ತು ಆಭರಣಗಳನ್ನು ದೋಚಿದ್ದಾನೆ ಎಂದು ರಾಖಿ ಸಾವಂತ್​, ಆದಿಲ್​ ವಿರುದ್ಧ ದೂರು ದಾಖಲಿಸಿದ್ದಾಳೆ.

ಫೆ. 6ರಂದು ರಾಖಿ ದೂರು ನೀಡಿದ್ದು, ನಿನ್ನೆ ರಾತ್ರಿಯೇ ಆದಿಲ್​ ದುರಾನಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದರು.ಇಂದು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ಅಂಧೇರಿ ನ್ಯಾಯಾಲಯ ಸದ್ಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!