Wednesday, March 29, 2023

Latest Posts

ಮೋದಿ ಬ್ಲೂ ಜಾಕೆಟ್ ನಡುವೆ ಸುದ್ದಿಯಾದ ಖರ್ಗೆ ಲೂವಿ ವಿಟಾನ್ ಶಾಲು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾಜಿಕ ಜಾಲತಾಣದಲ್ಲಿ ಇಂದು ಹೆಚ್ಚು ಟ್ರೇಡಿಂಗ್ ಆಗಿದ್ದು ಅಂದರೆ ಅದು ಪ್ರಧಾನಿ ಮೋದಿ ಅವರ ಉಡುಗೆ. ಯಾಕೆಂದರೆ ಪ್ರಧಾನಿ ನರೇಂದ್ರ ಮೋದಿಗೆ ಬೆಂಗಳೂರಿನಲ್ಲಿ ಎನರ್ಜಿ ವೀಕ್ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಬಾಟಲಿ ತ್ಯಾಜ್ಯದಿಂದ ತಯಾರಿಸಿದ ಜಾಕೆಟ್ ಉಡುಗೊರೆಯಾಗಿ ನೀಡಲಾಗಿತ್ತು. ಇದೇ ಜಾಕೆಟ್ ಧರಿಸಿ ಮೋದಿ ಇಂದು ಸಂಸತ್ತಿಗೆ ಹಾಜರಾಗಿದ್ದರು.

ಇದೀಗ ಮತ್ತೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅದೇನೆಂದರೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಶಾಲು. ಇದಕ್ಕೆ ಕಾರಣ ಮಲ್ಲಿಕಾರ್ಜುನ ಖರ್ಗೆ ಧರಿಸಿದ್ದ ಶಾಲು ಲೂವಿ ವಿಟಾನ್ ಬ್ರಾಂಡ್ ಬಟ್ಟೆಯಾಗಿದೆ. ಈ ಶಾಲಿನ ಆನ್‌ಲೈನ್‌ ಬೆಲೆ 56,332 ರೂಪಾಯಿ.

ಹೌದು, ಇಂದು ಬಜೆಟ್ ಅಧಿವೇಶನದಲ್ಲಿ ಪಾಲ್ಗೊಂಡಿರುವ ಖರ್ಗೆ ಅವರು ದುಬಾರಿ Loui Vuitton ಸ್ಕಾರ್ಪ್ ಧರಿಸಿ ಪಾಲ್ಗೊಂಡಿದ್ದರು. ಹೀಗಾಗಿ ಖರ್ಗೆ ಶಾಲು ನೆಟ್ಟಿಗರ ಗಮನಸೆಳೆದಿದ್ದರೆ, ಇತ್ತ ಬಿಜೆಪಿ ಇದೇ ಪ್ರಶ್ನೆ ಮುಂದಿಟ್ಟು ಟ್ವೀಟ್ ಸಮರ ಆರಂಭಿಸಿದೆ.

ಬಿಜೆಪಿ ನಾಯಕ ಶೆಹಜಾದ್ ಪೂನಾವಾಲ ಈ ಕುರಿತು ಟ್ವೀಟ್ ಮೂಲಕ ಖರ್ಗೆ ಶಾಲು ವಿಚಾರ ಮುನ್ನಲೆಗೆ ತಂದಿದ್ದಾರೆ. ಪ್ರಧಾನಿ ಮೋದಿ ಭಾರತದಲ್ಲೇ ತಯಾರಿಸಿದ, ಅದರಲ್ಲೂ ಪ್ಲಾಸ್ಟಿಕ್ ಬಾಟಲಿ ತ್ಯಾಜ್ಯದಿಂದ ತಯಾರಿಸಿದ ಜಾಕೆಟ್ ಧರಿಸಿದ್ದಾರೆ. ಆದರೆ ಮಲ್ಲಿಕಾರ್ಜುನ ಖರ್ಗೆ ಲೂವಿ ವಿಟಾನ್ ಬ್ರ್ಯಾಂಡ್ ಶಾಲು ಧರಿಸಿದ್ದಾರೆ. ಪುನರ್‌ಬಳಕೆ ಮೂಲಕ ಭಾರತದ ಬೆಳವಣಿಗೆಯಲ್ಲಿ ಮೋದಿ ಮಹತ್ವದ ಸಂದೇಶ ಸಾರಿದ್ದಾರೆ. ಇದೇ ವೇಳೆ ಮಲ್ಲಿಕಾರ್ಜುನ ಖರ್ಗೆ ಲೂವಿ ವಿಟಾನ್ ಶಾಲು ಧರಿಸಿದ್ದಾರೆ. ಈ ಕುರಿತು ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಪೂನಾವಾಲ ಟ್ವೀಟ್ ಮಾಡಿದ್ದಾರೆ.

ಇದರ ಬೆನ್ನಲ್ಲೇ ನೆಟ್ಟಿಗರು ಖರ್ಗೆ ಧರಿಸಿದ ಲೂವಿ ವಿಟಾನ್ ಶಾಲು ಬೆಲೆ ಹುಡುಕಾಡಿದ್ದಾರೆ. ಲೂವಿ ವಿಟಾನ್ ಅಧಿಕೃತ ಆನ್‌ಲೈನ್ ವೆಬ್‌ಸೈಟ್‌ನಲ್ಲಿ ಈ ಶಾಲಿನ ಬೆಲೆ 56,332 ರೂಪಾಯಿ ಎಂದು ಉಲ್ಲೇಖಿಸಿದೆ. ಬಹುತೇಕರು ಮಲ್ಲಿಕಾರ್ಜುನ ಖರ್ಗೆ ಧರಿಸಿದ ಶಾಲಿನ ಬೆಲೆ 475 ಅಮೆರಿಕನ್ ಡಾಲರ್ ಅಂದರೆ 39,000 ರೂಪಾಯಿ ಎಂದು ಟ್ವೀಟ್ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!