ಹೊಸದಿಗಂತ ವರದಿ, ಬೀದರ್:
ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಸುಧಾರಣೆ ತರಬಯಸಿದ್ದು, ನನ್ನ ಮುಂದಿನ ಗ್ರಾಮ ವಾಸ್ತವ್ಯ ಚಿತ್ರದುರ್ಗದಲ್ಲಿ ಮಾಡುತ್ತಿದ್ದು, ಅಲ್ಲಿ ಭೂಮಿ ಇಲ್ಲದ ದಲಿತರಿಗೆ ಭೂಮಿ ಕೊಡುವ ಕೆಲಸ ಮಾಡುತ್ತೆನೆ ಎಂದು ಕಂದಾಯ ಸಚಿವರಾದ ಆರ್.ಅಶೋಕ ಹೇಳಿದರು.
ಅವರು ಶನಿವಾರ ವಡಗಾಂವ ಗ್ರಾಮದ ಬಿಸಿಎಂ ವಸತಿ ನಿಲಯದಲ್ಲಿ ಕರೆದ ಪತ್ರಿಕಾಗೋಷ್ಠಿಲ್ಲಿ ಮಾತನಾಡಿದರು
ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಕಂದಾಯ ಕ್ರಾಂತಿ ಎಂದು ಹೇಳಿದ್ದಾರೆ ಇನ್ನು ಮುಂದೆ ಜಿಲ್ಲಾಧಿಕಾರಿಗಳು ತಿಂಗಳಲ್ಲಿ 4 ಭಾರಿ ತಾಲ್ಲೂಕು ಕಚೇರಿಗೆ ಭೇಟಿ ನೀಡುವಂತೆ ಮಾಡುತ್ತೆನೆ ಎಂದು ಹೇಳಿದರು.
ನಾನು ರಾಜ್ಯದಲ್ಲಿ ಇಲ್ಲಿಯವರೆಗೆ 7 ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮಾಡಿದ್ದು, ಇದರಲ್ಲಿ 46 ಸಾವಿರಕ್ಕೂ ಹೆಚ್ಚು ಜನರ ಅಹವಾಲುಗಳಿಗೆ ಸ್ಪಂಧಿಸಲಾಗಿದೆ. 8ನೇ ಕಾರ್ಯಕ್ರಮ ಚಿತ್ರದುರ್ಗದಲ್ಲಿ ವಿಭಿನ್ನವಾಗಿ ಮಾಡುತ್ತಿದ್ದೇನೆ. ರಾಜ್ಯದಲ್ಲಿ ಹೆಚ್ಚಿನ ದಲಿತರಿಗೆ ಜಮೀನು ಇಲ್ಲದವರಿಗೆ ಜಮೀನು ಕೊಡುವದರ ಜೊತೆಗೆ ಆಯಾ ಜಿಲ್ಲೆಯ ಅಗತ್ಯತೆಗೆ ತಕ್ಕಂತೆ ಗ್ರಾಮ ವಾಸ್ತವ್ಯದಲ್ಲಿ ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸ ಮಾಡುತ್ತೆನೆ ಎಂದು ಹೇಳಿದರು.
ವಡಗಾಂವ ಗ್ರಾಮ ವಾಸ್ತವ್ಯದಲ್ಲಿ ಜನರಿಂದ ಬಂದ ಅಹವಾಲುಗಳಿಗೆ ಕಂದಾಯ ಇಲಾಖೆಯ ಸಂಬAಧಿಸಿದ ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ ನೀಡುವದರ ಜೊತೆಗೆ ಇತರ ಇಲಾಖೆಯ ಅರ್ಜಿಗಳನ್ನು ಸಂಬAಧಿಸಿದ ಇಲಾಖೆಯ ಅಧಿಕಾರಿಗಳಿಂದ ಅವುಗಳಿಗೆ ಆದಷ್ಟು ಬೇಗನೆ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಪಿಂಚಣಿ. ವಿಧವಾ ವೇತನ. ಅಂಗವಿಕಲರ ಮಾಶಾಸನ ಸೇರಿದಂತೆ ಕಂದಾಯ ಇಲಾಖೆ ಹಾಗೂ ಇತರ ಇಲಾಖೆಯ ಸಾರ್ವಜನಿಕರು ಕೊಟ್ಟ ಮನವಿಗಳಿಗೆ ತಕ್ಷಣದಲ್ಲಿಯೇ ಅವರ ಸಮಸ್ಯೆಗಳಿಗೆ ಪರಹಾರ ನೀಡಲಾಗಿದೆ ಎಂದರು.
ಬೀದರ ಜಿಲ್ಲೆಯ 98 ಜನ ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡಲಾಗಿದ್ದು ನಾನು ಇಂದು ಭೇಟಿ ನೀಡಿದ ಬಿಬಾನಾಯಕ ತಾಂಡಾವನ್ನು ಕಂದಾಯ ಗ್ರಾಮವನ್ನಾಗಿ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ 159210 ಜನ ರೈತರಿಗೆ ಬೆಳೆಹಾನಿ ಪರಿಹಾರ ವಿತರಣೆ ಮಾಡಲಾಗಿದೆ. 2021 ನೇ ಸಾಲಿನ ಮನೆ ಹಾನಿಗಳಾದ 1188 ಕುಟುಂಬಗಳಿಗೆ ಪರಿಹಾರವನ್ನು ನೀಡಲಾಗಿದೆ ಎಂದು ಸಚಿವರು ಹೇಳಿದರು.
ಪತ್ರಿಕಾಗೋಷ್ಠಿಗೆ ಮುಂದೆ ಸಚಿವರು ವಡಗಾಂವ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಬಾನಾಯಕ ತಾಂಡಾದ ಶಿವಾಜಿ ಜಾಧವ್ ಅವರ ಮನೆಯಲ್ಲಿ ಜೋಳದ ರೊಟ್ಟಿ. ಕಡ್ಲಿ. ಅವರೆ. ಹೆಸರು ಕಾಳುಗಳ ಗುಗ್ಗರಿ ಮತ್ತು ಮೆಂಥೆ ಪಲ್ಲೆ. ತೊಂಡೆಕಾಯಿ ಪಲ್ಲೆ. ಮೊಸರಿನ ಜೊತೆಗೆ ಬೆಳಗಿನ ಉಪಹಾರವನ್ನು ಸೇವಿಸಿ ಅವರ ಕುಟುಂಬದವರಿಗೆ ಕಂದಾಯ ಸಚಿವರು ಧನ್ಯವಾದ ತಿಳಿಸಿದರು. ಇವರ ಜೊತೆಗಿದ್ದ ಪಶು ಸಂಗೋಪನೆ ಸಚಿವರಾದ ಪ್ರಭು ಬಿ.ಚವ್ಹಾಣ ಅವರೊಂದಿಗೆ ಬಿಬಾ ನಾಯಕ ತಾಂಡಾದ ಮಹಿಳೆಯರೊಂದಿಗೆ ಲಂಬಾಣಿ ಜಾನಪದ ನೃತ್ಯಕ್ಕೆ ಸಚಿವರು ಹೆಜ್ಜೆ ಹಾಕಿದರು. ಜಿಲ್ಲಾಧಿಕಾರಿ ಗೋವಿಂದರೆಡ್ಡಿ. ಬಿಜೆಪಿ ಮುಖಂಡರಾದ ಸೂರ್ಯಕಾಂತ ನಾಗಮಾರಪಳ್ಳಿ. ಬಸವರಾಜ ದೇಶಮುಖ. ರಾಮಶೆಟ್ಟಿ ಪನ್ನಾಳೆ ಮಾರುತಿ ಚವ್ಹಾಣ. ಸೇರಿದಂತೆ ಇತರರು ಉಪಸ್ಥಿತರಿದ್ದರು.
ಈ ಪತ್ರಿಕಾಗೋಷ್ಠಿಯಲ್ಲಿ ಪಶು ಸಂಗೋಪನೆ ಸಚಿವರಾದ ಪ್ರಭು ಬಿ.ಚವ್ಹಾಣ. ಜಿಲ್ಲಾಧಿಕಾರಿ ಗೋವಿಂದರೆಡ್ಡಿ. ಬಿಜೆಪಿ ಮುಖಂಡರಾದ ಸೂರ್ಯಕಾಂತ ನಾಗಮಾರಪಳ್ಳಿ. ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತರ. ಔರಾದ ತಹಶಿಲ್ದಾರ ಅರುಣಕುಮಾರ ಕುಲ್ಕರ್ಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.