Friday, December 8, 2023

Latest Posts

ಇಮ್ರಾನ್‌ ಒಳ್ಳೆ ಕಾಮಿಡಿಯನ್‌; ಸಿಧು ಬದಲಿಗೆ ಕಪಿಲ್‌ ಶರ್ಮಾ ಶೋ ಸೇರಿಕೊಳ್ಳಲಿ ಎಂದ ಎಕ್ಸ್‌ ವೈಫ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಒಳ್ಳೆಯ ಪ್ರತಿಭೆಯಿರುವ ಹಾಸ್ಯಗಾರ. ಅವರಿಗೆ ಜನರನ್ನು ನಗಿಸುವ ಕಲೆ ಒಲಿದಿದೆ. ಪ್ರಖ್ಯಾತ ಕಾಮಿಡಿ ಕಾರ್ಯಕ್ರಮ ʼದಿ ಕಪಿಲ್‌ ಶರ್ಮಾ ಶೋʼ ನಲ್ಲಿ ನವಜ್ಯೋತ್‌ ಸಿಧು ಸ್ಥಾನವನ್ನು ರಿಪ್ಲೇಸ್‌ ಮಾಡುವ ಮೂಲಕ ಜನರನ್ನು ನಗೆಗಡಲಲ್ಲಿ ತೇಲಿಸುತ್ತಿರಬಹುದು ಎಂದು ಇಮ್ರಾನ್‌ ಖಾನ್‌ ಗೆ ಮಾಜಿಪತ್ನಿ ರೆಹಮ್ ಖಾನ್ ಸಲಹೆ ನೀಡಿದ್ದಾರೆ!.
ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಪಾಲಿಗೆ ಮಾಜಿಪತ್ನಿಯೇ ಕಟು ಟೀಕಾಕಾರ್ತಿ. ಅಧಿಕಾರದಿಂದ ಕೆಳಗಿಳಿಯುವ ಮುನ್ನ ಇಮ್ರಾನ್‌ ಭಾರತವನ್ನು ಬಾಯ್ತುಂಬಾ ಹೊಗಳಿದ್ದರು. ಅಲ್ಲದೇ ತಮ್ಮ‌ ಪದಚ್ಯುತಿಗೆ ವಿದೇಶಿ ಸಂಚು ಇತ್ತು ಎಂದು ಹೇಳಿದ್ದರು. ಈ ವಿಚಾರದ ಬಗ್ಗೆ ಮಾತನಾಡಿದ ರೆಹಮ್‌ ಖಾನ್‌ ಇಮ್ರಾನ್‌ ವಿರುದ್ಧ ವ್ಯಂಗ್ಯವಾಡಿದ್ದಾರೆ. ಇಮ್ರಾನ್‌ ಭಾರತದಲ್ಲಿಯೂ ಜನಪ್ರೀಯರಾಗುತ್ತಿದ್ದಾರೆ. ಅವರು ಇತ್ತೀಚೆಗೆ ಪಾಜಿ(ಸಿಧು) ಅವರಂತೆ ಕವಿತೆಗಳನ್ನೂ ಬರೆಯುವ ಹವ್ಯಾಸವನ್ನು ಪ್ರಾರಂಭಿಸಿದ್ದಾರೆ ಎಂದು ಕೇಳಲ್ಪಟ್ಟೆ. ಬಾಲಿವುಡ್‌ ನಲ್ಲಿ  ಉತ್ತಮ ಹಾಸ್ಯನಟನಾಗುವ ಎಲ್ಲಾ ಪ್ರತಿಭೆಗಳು ಇಮ್ರಾನ್‌ ಗಿದೆ. ಕಪಿಲ್‌ ಶರ್ಮಾ ಶೋ ಸೇರಿಕೊಂಡು ಜನರ ಚಪ್ಪಾಳೆ ಗಿಟ್ಟಿಸಲಿ ಎಂದು ರೆಹೆಮ್‌ ಖಾನ್‌ ಸಲಹೆ ನೀಡಿದ್ದಾರೆ.

ಇಮ್ರಾನ್ ಖಾನ್ ಯಾವಾಗಲೂ ಭ್ರಮೆಯಲ್ಲಿರುತ್ತಾರೆ. ಅವರು ಯಾರ ಸಲಹೆಯನ್ನು ಕೇಳುವುದಿಲ್ಲ. ಅವರು ನನ್ನ ಸಲಹೆಯನ್ನು ಕೇಳಿದರೆ ನಾನು ಅವರನ್ನು ಬಿಟ್ಟುಬಿಡುತ್ತಿರಲಿಲ್ಲ ಎಂದು ಆಕೆ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!