ಜೈಲಿನಲ್ಲಿರುವ ಇಮ್ರಾನ್​ ಖಾನ್ ಗೂ ಶುರುವಾಗಿದೆ ಆತಂಕ: ಬಿಡುಗಡೆ ಕೋರ್ಟ್ ಮೊರೆಹೋದ ಪಾಕ್ ಮಾಜಿ ಪ್ರಧಾನಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ಪಾಕ್​ ನಡುವೆ ದಾಳಿ ನಡೆಯುತ್ತಿದ್ದು, ಇದರ ನಡುವೆ ಜೈಲಿನ ಮೇಲೆ ಕೂಡ ಡ್ರೋನ್​ ದಾಳಿಯಾಗುವ ಸಾಧ್ಯತೆಗಳಿವೆ. ಹೀಗಾಗಿ ತನ್ನನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಪಾಕಿಸ್ತಾನ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ವಾಟ್ಸ್​ಆ್ಯಪ್​ ಸಂದೇಶದಲ್ಲಿ, ಇಮ್ರಾನ್​ ಖಾನ್​ ಬಿಡುಗಡೆಗಾಗಿ ಖೈಬರ್ ಪಖ್ತುಂಖ್ವಾ ಮುಖ್ಯಮಂತ್ರಿ ಅಲಿ ಅಮೀನ್ ಗಂಡಾಪುರ್ ಇಸ್ಲಾಮಾಬಾದ್ ಹೈಕೋರ್ಟ್ ಮೊರೆ ಹೋಗಿದ್ದಾರೆ ಎಂದು ತಿಳಿಸಲಾಗಿದೆ. ಇಮ್ರಾನ್​ ಖಾನ್​ ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಬಂಧಿತರಾಗಿದ್ದಾರೆ.

ಭಾರತದ ಜೊತೆಗೆ ಸದ್ಯದ ಯುದ್ಧ ಪರಿಸ್ಥಿತಿ ಹಿನ್ನೆಲೆಯಲ್ಲಿ ಈ ಮನವಿ ಮಾಡಲಾಗಿದ್ದು, ದೇಶದ ಸಾಮರಸ್ಯ ಮತ್ತು ಏಕತೆಗಾಗಿ ಹಾಗೂ ಅಡಿಯಾಲಾ ಜೈಲಿನ ಮೇಲೆ ಡ್ರೋನ್​ ದಾಳಿಯಾಗುವ ಸಾಧ್ಯತೆ ಇದೆ. ತಕ್ಷಣಕ್ಕೆ ಇಮ್ರಾನ್​ ಖಾನ್​ ಅವರನ್ನು ಪೆರೋಲ್​ ಮೇಲೆ ಬಿಡುಗಡೆ ಮಾಡುವಂತೆ ಕೋರಲಾಗಿದೆ. ಆದರೆ, ಕೋರ್ಟ್​ ಈ ಅರ್ಜಿ ವಿಚಾರಣೆಗೆ ಇನ್ನು ದಿನವನ್ನು ನಿಗದಿ ಮಾಡಿಲ್ಲ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!