Tuesday, March 28, 2023

Latest Posts

ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್​ಗೆ ಬಂಧನದ ಭೀತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್ :

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್​ಗೆ ಈಗ ಬಂಧನದ ಭೀತಿ (Arrest Fear For Imran Khan) ಎದುರಾಗಿದೆ.

ತೋಶಾಖಾನಾ ಪ್ರಕರಣದಲ್ಲಿ ಅವರ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರಂಟ್ (Non-bailable Arrest Warrant) ನ್ಯಾಯಾಲಯ ನೀಡಿದೆ. ವಾರಂಟ್ ಹಿಡಿದ ಇಸ್ಲಾಮಾಬಾದ್ ಪೊಲೀಸರು ಲಾಹೋರ್​ನಲ್ಲಿರುವ ಇಮ್ರಾನ್ ಖಾನ್ ನಿವಾಸಕ್ಕೆ ಹೋಗಿದ್ದಾರೆ. ಆದರೆ, ಮಾಜಿ ಪ್ರಧಾನಿಗಳು ಮನೆಯಲ್ಲಿರಲಿಲ್ಲ. ಹೀಗಾಗಿ ಅವರ ಬಂಧನ ವಿಳಂಬವಾಗಿದೆ ಎಂದು ಕೆಲ ವರದಿಗಳು ಪಾಕಿಸ್ತಾನದಿಂದ ಬಂದಿವೆ.

ತೋಶಾಖಾನಾ ಪ್ರಕರಣದಲ್ಲಿ ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರಾಗಲು ಸತತವಾಗಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಸೆಷೆನ್ಸ್ ಕೋರ್ಟ್​ವೊಂದು ಖಾನ್ ವಿರುದ್ಧ ಜಾಮೀನುರಹಿತ ಬಂಧನ ವಾರಂಟ್ ಹೊರಡಿಸಿದೆ ಎಂದು ಹೇಳಲಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!