Sunday, December 4, 2022

Latest Posts

ಇಮ್ರಾನ್​ ಖಾನ್​ ನಟನೆ ಶಾರುಖ್, ಸಲ್ಮಾನ್ ಅನ್ನು ಮೀರಿಸುವಂತಿದೆ: ಪಾಕ್ ನಾಯಕ ವ್ಯಂಗ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕ್ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಮೇಲೆ ಗುಂಡಿನ ದಾಳಿ ನಡೆದಿದ್ದವೇಳೆ ಬಲಗಾಲಿಗೆ ಗಾಯವಾಗಿತ್ತು. ಇದರಿಂದ ಆಸ್ಪತ್ರೆ ಸೇರಿದ್ದ ಇಮ್ರಾನ್, ಇದೀಗ ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಳ್ಳುತ್ತಿದ್ದಾರೆ.

ಈ ವೇಳೆ ಪಾಕಿಸ್ತಾನದ ಪ್ರಜಾಸತ್ತಾತ್ಮಕ ಚಳವಳಿಯ(PDM) ಮುಖ್ಯಸ್ಥ ಮೌಲಾನಾ ಫಝ್ಲುರ್ ರೆಹಮಾನ್, ಇಮ್ರನಾ ಖಾನ್ ಅವರನ್ನು ವ್ಯಂಗ್ಯವಾಡಿದ್ದಾರೆ.

ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗುಂಡಿನ ದಾಳಿಯಾಗಿರುವುದು ಘಟನೆ ಇದೊಂದು ನಾಟಕ. ಇಮ್ರಾನ್ ಖಾನ್ ನಟನೆ ಶಾರುಖ್ ಖಾನ್, ಸಲ್ಮಾನ್ ಖಾನ್ ಅವರನ್ನು ಮೀರಿಸುವಂತಿದೆ ಎಂದು ಹೇಳಿದ್ದಾರೆ.

ಅಲ್ಲದೇ, ಈ ಘಟನೆಯ ಮೂಲಕ ಇಮ್ರಾನ್ ಖಾನ್ ತಾನೊಬ್ಬ ಒಳ್ಳೆಯ ನಟ ಎಂಬುವುದನ್ನು ಜಗತ್ತಿಗೆ ತಿಳಿಸಿದ್ದಾರೆ. ಇಮ್ರಾನ್ ಮೇಲೆ ಗುಂಡಿನ ದಾಳಿಯಾದಾಗ ನಾನು ಮೊದಲು ಸಹಾನುಭೂತಿ ಹೊಂದಿದ್ದೆ. ಆದರೆ ಈಗ ನನಗಿದು ನಾಟಕ ಎಂದೆನಿಸುತ್ತಿದೆ. ಖಾನ್ ಅವರ ಕಾಲಿಗೆ ಆದ ಗಾಯ ನನ್ನಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!