ಬೆಂಗಳೂರಿನಲ್ಲಿ ಚಾಲಕ ರಹಿತ ಮೆಟ್ರೋ ರೈಲು ಚಾಲನೆಗೆ ಬಿಎಂಆರ್ ಸಿಎಲ್ ಸಿದ್ಧತೆ

ಹೊಸದಿಗಂತ ಡಿಜಜಿಟಲ್ ಡೆಸ್ಕ್:

ರಾಜಧಾನಿಯಲ್ಲಿ ನಮ್ಮ ಮೆಟ್ರೋ ಯೋಜನೆ ಮತ್ತಷ್ಟು ವಿಸ್ತರಿಸಲು ಸರ್ಕಾರ ಸಿದ್ಧತೆ ನಡೆಸಿದ್ದು, ಇದರ ಮಧ್ಯೆ ಇದುವರೆಗೂ ಪೈಲಟ್ ಸಹಿತ ಚಲಿಸುತ್ತಿದ್ದ ನಮ್ಮ‌ ಮೆಟ್ರೋವನ್ನು ಇನ್ಮುಂದೆ ಪೈಲಟ್ ರಹಿತ ಚಲಿಸಲು ಸಿದ್ಧತೆ ನಡೆಸುತ್ತಿದೆ.
ಬೆಂಗಳೂರಿನಲ್ಲಿ ಸಂಚರಿಸುವ ಮೆಟ್ರೋ ರೈಲುಗಳಲ್ಲಿ ಈ ಹಿಂದೆ ಪೈಲಟ್ ಗಳು ಇರುತ್ತಿದ್ದರು. ಆದರೆ ಇನ್ನು ಮುಂದೆ ಬೆಂಗಳೂರಿನಲ್ಲಿ ಚಾಲಕ ರಹಿತ ಮೆಟ್ರೋ ರೈಲುಗಳು ಓಡಾಟ ನಡೆಸಲಿವೆ. ಈ ರೈಲುಗಳನ್ನು ನಿಯಂತ್ರಣ ಕೊಠಡಿಯಿಂದ ನಿಯಂತ್ರಿಸುವ ವ್ಯವಸ್ಥೆ ಇರಲಿದೆ. ಮೆಟ್ರೋ ಚಾಲಕನ ಕೆಲ ತಪ್ಪುಗಳಿಂದ ನಗರದಲ್ಲಿ ಆಗಾಗ ಟ್ರೇನ್ ಗಳು ಸ್ಥಗಿತವಾಗುತ್ತಿದ್ದವು ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ಚಾಲಕ ರಹಿತ ಮೆಟ್ರೋ ರೈಲು ಓಡಿಸಲು ನಮ್ಮ ಮೆಟ್ರೋ ನಿಗಮ ತಯಾರಿ ನಡೆಸಿದ್ದು, ಪೈಲಟ್ ರಹಿತ ನಮ್ಮ ಮೆಟ್ರೋ ಕಾರ್ಯಾಚರಣೆಗೆ ತಯಾರಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!