ಹೊಸ ದಿಗಂತ ವರದಿ , ವಿಜಯಪುರ:
ಗುಮ್ಮಟ ನಗರದಲ್ಲಿ ರಾತ್ರಿ 8.17 ಗಂಟೆಗೆ ಲಘು ಭೂಕಂಪನದ ಅನುಭವಕ್ಕೆ ಸಾರ್ವಜನಿಕರು ಬೆಚ್ಚಿ ಬೀಳುವಂತಾಗಿದೆ.
ಏಕಾಏಕಿ ವಿಚಿತ್ರ ಸದ್ದಿನೊಂದಿಗೆ ಒಂದು ಕ್ಷಣ ಭೂಮಿ ಕಂಪಿಸಿದ್ದು, ಜನರು ಗಾಬರಿಗೊಂಡು ಮನೆಯಿಂದ ಹೊರ ಓಡಿ ಬಂದಿದ್ದಾರೆ.
ಇಲ್ಲಿನ ದರಬಾರ ಗಲ್ಲಿ, ಜಲನಗರ, ಶಿಕಾರಖಾನೆ ಹಾಗೂ ನಗರ ಸೇರಿದಂತೆ ಬರಟಗಿ, ಜಾಲಗೇರಿ, ಅರಕೇರಿ ಭಾಗದಲ್ಲಿ ಲಘು ಭೂಕಂಪನದ ಅನುಭವವಾಗಿದೆ.