ತನ್ನ 105ನೇ ವರ್ಷದಲ್ಲಿ ನಾಲ್ಕನೇ ತರಗತಿಯ ಸಮಾನತೆ ಪರೀಕ್ಷೆ ಬರೆದ್ರು ಕುಂಜಿಪೆಣ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದ ವಡಕ್ಕೇರಾ ನಿವಾಸಿ ಕುಂಜಿಪೆಣ್ ಎಂಬ 105 ವರ್ಷದ ಅಕ್ಷರ ಪ್ರೇಮಿ ವೃದ್ಧೆ ನಾಲ್ಕನೇ ತರಗತಿಯ ಸಮಾನತೆ ಪರೀಕ್ಷೆ ಬರೆದು ಶಿಕ್ಷಣ ಕ್ಷೇತ್ರಕ್ಕೆ ಶಾಕ್ ನೀಡಿದ್ದಾರೆ!

ಸಾಕ್ಷರತಾ ಮಿಷನ್ ನಡೆಸಿದ್ದ ಸಮಾನತಾ ಪರೀಕ್ಷೆಯಲ್ಲಿ ಹಾಜರಾಗಿ ಪರೀಕ್ಷೆ ಬರೆದ ಈಕೆಯ ಜೊತೆಗೆ 83 ವರ್ಷದ ಕಡಿಯಾಕುಟ್ಟಿ ಎಂಬವರೂ ಪರೀಕ್ಷೆ ಬರೆದಿದ್ದಾರೆ. ಈ ಮೂಲಕ ವಿದ್ಯೆ ಕಲಿಯಲು ವಯಸ್ಸಿನ ಹಂಗಿಲ್ಲ ಎಂಬುದನ್ನು ಸಾರಿದ್ದಾರೆ.

ಓದಿ ಪರೀಕ್ಷೆ ಬರೆಯುವುದಕ್ಕಿಂತ ಈ ವಯಸ್ಸಿನಲ್ಲಿ ಅಕ್ಷರ ಕಲಿಯಬೇಕು ಎಂಬುದು ನನ್ನ ಕನಸು ಎನ್ನುವ ಈ ಅಜ್ಜಿ, ಏಳು ಮಕ್ಕಳು ಮತ್ತು 26 ಮೊಮ್ಮಕ್ಕಳನ್ನು ಹೊಂದಿದ್ದಾರೆ.
ಇಳಿವಯಸ್ಸಿನಲ್ಲಿಯೂ ಪಂಗ್ ಸರ್ಕಾರಿ ಎಲ್‌ಪಿ ಶಾಲೆಗೆ ಬಂದು ಪರೀಕ್ಷೆ ಬರೆದ ಇವರಿಗೆ ಹ್ಯಾಟ್ಸಾಫ್ ಹೇಳದಿದ್ದರೆ ಹ್ಯಾಗೆ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!