ಮೈಸೂರಿನಲ್ಲಿ ಚಿರತೆ ದಾಳಿಗೆ ಮತ್ತೊಂದು ಬಲಿ!

ಹೊಸ ದಿಗಂತ ವರದಿ, ಮೈಸೂರು:

ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನಲ್ಲಿ ಕಳೆದ ತಿಂಗಳ ಹಿಂದೆಯಷ್ಟೇ ಚಿರತೆ ದಾಳಿಯಿಂದ ಎಂ.ಎಲ್.ಹುಂಡಿಯ ಯುವಕನೊಬ್ಬ ಬಲಿಯಾದ  ನೆನಪು ಮಾಸುವ ಮುನ್ನವೇ ಚಿರತೆ ಮತ್ತೊಂದು ಬಲಿಯನ್ನು  ಪಡೆದಿದೆ.

ತಾಲೂಕಿನ ಎಸ್.ಕೆಬ್ಬೆಹುಂಡಿ ಗ್ರಾಮದ ಮೇಘನಾ (22) ಯುವತಿಯು ಚಿರತೆ ದಾಳಿಗೆ  ಬಲಿಯಾಗಿದ್ದಾಳೆ. ಈಕೆ ಹಿತ್ತಲಿಗೆ ಹೋಗಿದ್ದ ಸಮಯದಲ್ಲಿ ಚಿರತೆ ದಾಳಿ ನಡೆಸಿದೆ .ಹೆಚ್ಚಿನ ಚಿಕಿತ್ಸೆಗಾಗಿ ಯುವತಿಯನ್ನು ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ  ಯುವತಿ ಮೃತಪಟ್ಟಿದ್ದಾಳೆ .

ಚಿರತೆ ಹಿಡಿಯುವಂತೆ ಸಾರ್ವಜನಿಕರು ಹಲವು ಬಾರಿ ಮನವಿ ಮಾಡಿದರೂ ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ಈಗ ಮತ್ತೊಂದು ಬಡ ಜೀವ ಜೀವ ಕಳೆದುಕೊಂಡಂತಾಗಿದೆ .

ಸಾರ್ವಜನಿಕರ ಆಕ್ರೋಶ
ಕಳೆದ ತಿಂಗಳಷ್ಟೇ ಚಿರತೆ ದಾಳಿಯಿಂದ ಯುವಕ ಸಾವನ್ನಪ್ಪಿದ್ದು ,ಈಗ ಯುವತಿಯ ಬಲಿ ಪಡೆದಿದೆ.ಚಿರತೆ ದಾಳಿಯಿಂದ ನಿರಂತರ ದಾಳಿ ನಡೆಯುತ್ತಿದ್ದರೂ ಚಿರತೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಮತ್ತು ತಾಲೂಕು ಆಡಳಿತ ವಿಫಲತೆ ಕಂಡಿದೆ ಎಂದು ಆಕ್ರೋಶಗೊಂಡ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಭೇಟಿ ನೀಡಿದ ಶಾಸಕರು,ದುರ್ಘಟನೆಗೆ ಸಂತಾಪ ಸೂಚಿಸಿದರು.ಸ್ಥಳದಲ್ಲೇ ಪ್ರತಿಭಟನಾ ನಿರತ  ಜೊತೆ ಧರಣಿಗೆ ಕೂತ ಶಾಸಕರು ಸ್ಥಳಕ್ಕೆ ಜಿಲ್ಲಾಧಿಕಾರಿಗಳು,ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಬೇಕು ಎಂದು ಪಟ್ಟುಹಿಡಿದರು .ಸ್ಥಳದಲ್ಲಿ ಡಿವೈಎಸ್ಪಿ  ಗೋವಿಂದರಾಜು ,ಪಿಎಸ್ಐ ತಿರುಮಲ್ಲೇಶ್,ಡಾ .ಭಾರತಿ ,ಡಾ .ರೇವಣ್ಣ ಇತರರು ಹಾಜರಿದ್ದರು .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!