ನಮ್ಮ ದೃಷ್ಟಿಯಲ್ಲಿ ಅರುಣಾಚಲ ಎಂದಿಗೂ ಭಾರತದ್ದೇ ಎಂದ ಅಮೆರಿಕ: ಚೀನಾಗೆ ತೀವ್ರ ಮುಖಭಂಗ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅರುಣಾಚರ ಪ್ರದೇಶವು ಚೀನಾಗೆ ಸೇರಿದ್ದಲ್ಲ. ಅದನ್ನು ನಾವು ಭಾರತದ ಭೂಭಾಗ ಎಂದೇ ಪರಿಗಣಿಸುತ್ತೇವೆ ಎಂದು ಅಮೆರಿಕ ಹೇಳಿದ್ದು, ಈ ಹೇಳಿಕೆ ಜಾಗತಿಕ ಮಟ್ಟದಲ್ಲಿ ಚೀನಾಗೆ ತೀವ್ರ ಮುಖಭಂಗ ಉಂಟುಮಾಡಿದೆ.

ಜೊತೆಗೆ ಇಲ್ಲಿನ ಆಕ್ರಮಣ, ಅತಿಕ್ರಮಣ, ಮಿಲಿಟರಿ ಅಥವಾ ನಾಗರಿಕರ ಮೂಲಕ ಪ್ರಾದೇಶಿಕ ಹಕ್ಕುಗಳನ್ನು ಮುಂದಿಡುವ ಯಾವುದೇ ಏಕಪಕ್ಷೀಯ ಪ್ರಯತ್ನಗಳನ್ನು ನಾವು ವಿರೋಧಿಸುತ್ತೇವೆ ಎಂದೂ ಹೇಳಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿರುವ ವಿದೇಶಾಂಗ ಇಲಾಖೆ ಪ್ರಧಾನ ಉಪ ವಕ್ತಾರ ವೇದಾಂತ್ ಪಟೇಲ್, ಅರುಣಾಚಲ ಪ್ರದೇಶದ ಮೇಲೆ ಚೀನಾ ಸ್ಥಾಪಿಸುತ್ತಿರುವ ಪ್ರಾದೇಶಿಕ ಹಕ್ಕುಗಳನ್ನು ಭಾರತ ವಿರೋಧಿಸುತ್ತಾ ಬಂದಿದೆ. ಅರುಣಾಚಲ ಪ್ರದೇಶ ದೇಶದ ಅವಿಭಾಜ್ಯ ಅಂಗ.

ಈ ಪ್ರದೇಶದ ಹೆಸರನ್ನು ಬದಲಾಯಿಸುವ ಚೀನಾ ಪ್ರಯತ್ನವನ್ನು ಭಾರತ ವಿಫಲಗೊಳಿಸುತ್ತ ಬಂದಿದೆ. ಅರುಣಾಚಲ ಕುರಿತಾಗಿ ಚೀನಾ ರಕ್ಷಣಾ ಸಚಿವಾಲಯದ ವಕ್ತಾರರು ಅಸಂಬದ್ಧ ಹೇಳಿಕೆಗಳನ್ನು ನೀಡಿದ್ದಾರೆ. ಇದನ್ನು ನಾವು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಅರುಣಾಚಲ ಪ್ರದೇಶ ಭಾರತದ ಕೈಯಲ್ಲೇ ಇತ್ತು ಹಾಗೂ ಅದು ಭಾರತ ಅವಿಭಾಜ್ಯ ಅಂಗವೇ ಗಿರುತ್ತದೆ ಎಂದಿದ್ದಾರೆ.

ಚೀನಾ ಈ ಭಾಗದಲ್ಲಿ ಭಾರತ ತನ್ನ ಹಿಡಿತವನ್ನು ಅಕ್ರಮವಾಗಿ ಮಾಡಿಕೊಂಡಿದೆ ಎಂದು ಆರೋಪಿಸುತ್ತಿದೆ. ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್ ಎಂದು ಪ್ರತಿಪಾದಿಸುವ ಚೀನಾ, ಈ ಭಾಗಕ್ಕೆ ಭಾರತದ ನಾಯಕರು ಬರುವುದನ್ನು ವಿರೋಧಿಸುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!