ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆ ಭಾರತಕ್ಕಿಂತ ಕಡಿಮೆ ಅಂತ ಒಂದೊಮ್ಮೆ ಸಂಭ್ರಮಿಸಿದವರೆಲ್ಲ ಈ ಸುದ್ದಿ ಓದಿ…

ಹೊಸದಿಗಂತ ಡಿಜಿಟಲ್‌ ಡೆಸ್ಕ್
‌ಕೆಲ ದಿನಗಳ ಹಿಂದಿನ ಮಾತು.. ಅಂತಾರಾಷ್ಟ್ರೀಯ ಮಾರುಕಟ್ಟೆಯ ದರಗಳಿಗೆ ಅನುಗುಣವಾಗಿ ಕೇಂದ್ರ ಸರ್ಕಾರ ಪೆಟ್ರೋಲ್‌ ದರ ಏರಿಕೆ ಮಾಡಿದಾಗ ಒಂದು ವರ್ಗದ ಜನ ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆ ಭಾರತಕ್ಕಿಂತ ಕಡಿಮೆ ಎಂದು ಹುಯಿಲಿಟ್ಟಿದ್ದರು. ವಿಶೇಷವಾಗಿ ಅಂತಹವರು ಗಮನಿಸಬೇಕಾದ ಸುದ್ದಿ ಇದು. ಭಾರತದಲ್ಲಿ ಬೆಲೆ ಏರಿಕೆ ಬಳಿಕವೂ ಪೆಟ್ರೋಲ್‌ ದರ 100 ರು. ಆಸುಪಾಸಿನಲ್ಲೇ ಇದೆ. ಆದರೆ ಇದೀಗ ಪಾಕ್‌ ನಲ್ಲಿ ಪೆಟ್ರೋಲ್‌ ದರ ಏರುಗತಿಯಲ್ಲೇ ಸಾಗಿ ದ್ವಿಶತಕವನ್ನೂ ದಾಖಲಿಸಿ ಮುನ್ನುಗ್ಗುತ್ತಿದೆ!.
ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದ ಹಣದುಬ್ಬರ ಪೀಡಿತ ಪಾಕಿಸ್ತಾನ ಸರ್ಕಾರವು ಬುಧವಾರ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 1.45 ರು. ಹೆಚ್ಚಿಸಿದೆ. ಇದರೊಂದಿಗೆ ದೇಶದಲ್ಲಿ ಹೊಸ ಪೆಟ್ರೋಲ್ ದರಗಳು ಲೀಟರ್‌ಗೆ 237.43 ರು. ಗಳಿಗೆ ಏರಿಕೆ ಕಂಡಿದೆ.
ಜಾಗತಿಕ ತೈಲ ಬೆಲೆಗಳ ಏರಿಳಿತ ಮತ್ತು ವಿನಿಮಯ ದರದ ವ್ಯತ್ಯಾಸದಿಂದಾಗಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಪಾಕ್‌ ಸರ್ಕಾರದ ಕೈ ಮೀರಿ ಸಾಗುತ್ತಿದೆ.
ಪಾಕಿಸ್ತಾನದಲ್ಲಿ ಇತ್ತೀಚಿನ ಪ್ರವಾಹಗಳು ದೇಶದ ಹೆಚ್ಚಿನ ಭಾಗಗಳನ್ನು ಮುಳುಗಿಸಿ 1,500 ಕ್ಕೂ ಹೆಚ್ಚು ಜನರನ್ನು ಬಲಿಪಡೆದಿತ್ತು. ಇದು 33 ಮಿಲಿಯನ್ ಜನರನ್ನು ಬಾಧಿಸಿದೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಉಚ್ಚಾಟನೆಯ ಬಳಿಕ ದೇಶ ಮತ್ತಷ್ಟು ಅಸ್ಥಿರತೆಯತ್ತ ಸಾಗುತ್ತಿದ್ದು ದೇಶವನ್ನು ಆರ್ಥಿಕ ಕುಸಿತದ ಅಂಚಿನಲ್ಲಿ ತಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!